ಕರ್ನಾಟಕ

karnataka

ETV Bharat / state

ಸ್ನೇಹಿತನಿಗೆ 3 ಸಾವಿರ ಗೂಗಲ್ ಪೇ ಮಾಡಿದ: ಯಾಮಾರಿ 99,405 ರೂಪಾಯಿ ಕಳೆದುಕೊಂಡ!

ಗೂಗಲ್​ ಪೇ ಮುಖಾಂತರ ಹಣದ ವ್ಯವಹಾರ ನಡೆಸುವುದು ಈಗ ಸಾಮಾನ್ಯವಾಗಿಬಿಟ್ಟಿದೆ. ಆದರೆ ವ್ಯಕ್ತಿಯೊಬ್ಬ ಈಗ ಯಾಮಾರಿ ತನ್ನ ಖಾತೆಯಲ್ಲಿದ್ದ ಹಣ ಕಳೆದಕೊಂಡು ಕೈ ಕೈ ಹಿಸುಕಿಕೊಳ್ಳುತ್ತಿದ್ದಾನೆ.

dcd
ಯಾಮಾರಿ 99,405 ರೂಪಾಯಿ ಕಳೆದುಕೊಂಡ ವ್ಯಕ್ತಿ

By

Published : Aug 28, 2020, 1:08 PM IST

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಶಂಕರಗುಡ್ಡ ಗ್ರಾಮದ ಯುವಕ ಹರನ್ ಚಂದ್ರ ಮಂಡಲ್ ಎಂಬಾತ ತನ್ನ ಸ್ನೇಹಿತನಿಗೆ ಗೂಗಲ್ ಪೇ ಮೂಲಕ ಹಣ ಕಳುಹಿಸಿದ್ದ. ಆದರೆ ಖಾತೆಯಿಂದ ಹಣ ಕಡಿತವಾದರೂ ಸ್ನೇಹಿತನಿಗೆ ಹಣ ತಲುಪದೆ ಗೊಂದಲ ಸೃಷ್ಟಿಯಾಗಿದೆ.

ನಂತರ ಹರನ್ ಸಹಾಯಕ್ಕಾಗಿ ಗೂಗಲ್​ನಲ್ಲಿ ಗೂಗಲ್ ಪೇ ಟೋಲ್​ ಫ್ರೀ ನಂಬರ್​ಗೆ ಕರೆ ಮಾಡಿದ್ದಾನೆ. ನಂತರ 9832749337 ನಂಬರ್​ ಸಿಕ್ಕಿದೆ. ಕರೆ ಮಾಡಿದಾಗ ಗೂಗಲ್ ಪೇನಲ್ಲಿ ದೋಷವುಂಟಾಗಿದೆ. ಅದನ್ನು ಸರಿಪಡಿಸುವುದಾಗಿ ಹೇಳಿ ಕ್ಯೂ.ಎಸ್ ಅಪ್ಲಿಕೇಶನ್ ಡೌನ್​ಲೋಡ್ ಮಾಡಿಕೊಂಡು ನಂತರ ಗೂಗಲ್ ಪೇನಲ್ಲಿ ನಿಮ್ಮ ಬ್ಯಾಂಕ್ ಖಾತೆಯ ಎ.ಟಿ.ಎಂ ಕಾರ್ಡ್​ ಹಾಕುವಂತೆ ವ್ಯಕ್ತಿಯೊಬ್ಬ ತಿಳಿಸಿದ್ದಾನೆ.

ಹರನ್​ ಯಥಾವತ್ತಾಗಿ ತನ್ನ ಬ್ಯಾಂಕ್ ಖಾತೆಯ ಎಲ್ಲಾ ಮಾಹಿತಿಯನ್ನು ಆ್ಯಪ್​ನಲ್ಲಿ ಹಾಕಿದ್ದಾನೆ. ಇದಾದ ತಕ್ಷಣ ಹರನ್ ಖಾತೆಯಿಂದ ಹಂತ ಹಂತವಾಗಿ 99,405 ರೂಪಾಯಿ ಕಡಿತವಾಗಿದೆ. ಇದರಿಂದ ಹಣ ಕಳೆದುಕೊಂಡ ಹರನ್​ ಈ ಸಂಬಂಧ ಈಗ ಸೈಬರ್ ಕ್ರೈಮ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.

ABOUT THE AUTHOR

...view details