ಬಳ್ಳಾರಿ:ನಗರದ ಹೊರವಲಯದ ಗೌತಮ ನಗರದ ನಿವಾಸಿ ಮೆಹಬೂಬ್ ಬಾಷ (24 ) ಮಾನಸಿಕವಾಗಿ ನೊಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ತೊಟ್ಟಿಲಿಗೆ ಕಟ್ಟಿದ ಸೀರೆಯಿಂದ ನೇಣು ಬಿಗಿದುಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಾನಸಿಕವಾಗಿ ನೊಂದ ಯುವಕ... ತೊಟ್ಟಿಲಿಗೆ ಕಟ್ಟಿದ ಸೀರೆಯಿಂದಲೇ ನೇಣಿಗೆ ಶರಣು - ಲಾರಿ ಕ್ಲಿನರ್ ಆಗಿ ಕೆಲಸ ಮಾಡುತ್ತಿದ್ದ ಮೆಹಬೂಬ್ ಬಾಷ
ಬಳ್ಳಾರಿ ನಗರದ ಹೊರವಲಯದ ಗೌತಮ ನಗರದ ನಿವಾಸಿಯೊಬ್ಬ ಮಾನಸಿಕವಾಗಿ ನೊಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ತೊಟ್ಟಿಲಿಗೆ ಕಟ್ಟಿದ ಸೀರೆಯಿಂದ ನೇಣು ಬಿಗಿದುಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ .
ಲಾರಿ ಕ್ಲಿನರ್ ಆಗಿ ಕೆಲಸ ಮಾಡುತ್ತಿದ್ದ ಮೆಹಬೂಬ್ ಬಾಷ ಕೆಲದಿನಗಳ ಹಿಂದೆ ಸಾಕಷ್ಟು ಕುಡಿಯುವ ಚಟವನ್ನು ಕಲಿತ್ತಿದ್ದ, ದುಡಿದ ಹಣದಲ್ಲಿ ಮನೆಗೆ ಸ್ವಲ್ಪ ಹಣಕೊಟ್ಟು ಉಳಿದಿದ್ದನ್ನು ಪೂರ್ತಿ ಕುಡಿಯಲು ಬಳಸುತ್ತಿದ್ದ ಎನ್ನಲಾಗಿದೆ.
15ನೇ ತಾರೀಖು ಮನೆಗೆ ಬಂದು ಹೆಂಡತಿಗೆ ಹಣ ಕೊಡು ಎಂದು ಕೇಳಿದ್ದಾನೆ. ಆಗ ಹೆಂಡತಿ ನಿರಾಕರಿಸಿದ್ದಕ್ಕೆ, ಬೇರೆ ಯಾರ ಬಳಿಯಾದರು ಹಸಾಲ ತೆಗೆದು ಬಾ ಎಂದಿದ್ದಾನೆ. ಆಗ ಹೆಂಡತಿ ಗೌಸಿಯ ಬೇರೆಯವರ ಬಳಿ ಹಣ ಕೇಳಲು ಹೋದಾಗ ಮನನೊಂದಿರುವ ಮೆಹಬೂಬ್ ಬಾಷಾ ಮನೆಯ ಒಳಗೆ ಚಿಲಕ ಹಾಕಿಕೊಂಡು ಸೀರೆಯಿಂದ ನೇಣಿಗೆ ಶರಣಾಗಿದ್ದಾನೆ. ಪತ್ನಿ ಗೌಸಿಯಾ ನೀಡಿದ ದೂರಿನ್ವಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.