ಬಳ್ಳಾರಿ:ಜಿಲ್ಲೆಯ ಕೊಟ್ಟೂರು ಪಟ್ಟಣದ ಸರ್ಕಾರಿ ಬಾಲಕರ ಪ್ರೌಢ ಶಾಲೆಯ ನೂತನ ಕೊಠಡಿಗಳಿಗೆ ಕ್ಯೂರಿಂಗ್ ಮಾಡಲು ಮುಂದಾದ ವ್ಯಕ್ತಿಗೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕ್ಯೂರಿಂಗ್ ಮಾಡುವಾಗ ವಿದ್ಯುತ್ ತಗುಲಿ ವ್ಯಕ್ತಿ ಸಾವು - ಬಳ್ಳಾರಿ ಅಪರಾಧ ಸುದ್ದಿ
ಶಾಲೆಯ ನೂತನ ಕೊಠಡಿಗಳಿಗೆ ಕ್ಯೂರಿಂಗ್ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವಿದ್ಯುತ್ ತಗುಲಿ ವ್ಯಕ್ತಿ ಸಾವು
ಶಾಂತನ ಬಸವನಗೌಡ (58) ಮೃತ ದುರ್ದೈವಿ. ಸರ್ಕಾರಿ ಬಾಲಕರ ಪ್ರೌಢ ಶಾಲೆಯ ನೂತನ ಕೊಠಡಿಗಳ ನಿರ್ಮಾಣ ಕಾರ್ಯವನ್ನ ಗುತ್ತಿಗೆದಾರೊಬ್ಬರು ಕೈಗೊಂಡು ಇದಕ್ಕೆ ನೀರುಣಿಸಲು ಬಸವನಗೌಡ ಎಂಬಾತನನ್ನು ಕೂಲಿ ಆಧಾರದ ಮೇಲೆ ನೇಮಿಸಿಕೊಂಡಿದ್ದ. ನಿತ್ಯ ಕೊಠಡಿಗಳಿಗೆ ಎರಡು ಬಾರಿ ನೀರುಣಿಸುತ್ತಿದ್ದ. ಅಂತೆಯೇ ನಿನ್ನೆ ಮಧ್ಯಾಹ್ನ ಅದೇ ಕಾರ್ಯದಲ್ಲಿ ತೊಡಗಿಸಿಕೊಂಡಾಗ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ.
ಇನ್ನು ಘಟನಾ ಸ್ಥಳಕ್ಕೆ ಸಬ್ ಇನ್‍ಸ್ಪೆಕ್ಟರ್ ಎಚ್.ನಾಗಪ್ಪ, ಜೆಸ್ಕಾಂ ಇಂಜಿನಿಯರ್ ಚೇತನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.