ಬಳ್ಳಾರಿ:ಯುವಕನೋರ್ವ ನಾಲಿಗೆ ಕತ್ತರಿಸಿ ದೇವರಿಗೆ ಅರ್ಪಿಸಿದ ವಿಚಿತ್ರ ಘಟನೆ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಉಪ್ಪಾರ ಹೊಸಹಳ್ಳಿ ಗ್ರಾಮದ 24 ವರ್ಷದ ಅಗಸರ ವೀರೇಶ್ ಎಂಬಾತನೇ ನಾಲಿಗೆ ಕತ್ತರಿಸಿಕೊಂಡಿರುವ ಯುವಕ.
ಶಂಕರಪ್ಪ ತಾತನ ಮೇಲೆ ಯುವಕ ನಂಬಿಕೆ ಇಟ್ಟುಕೊಂಡಿದ್ದನಂತೆ. ಆದರೆ ನಾಲಿಗೆ ಕತ್ತರಿಸಿಕೊಂಡ ವೇಳೆ ಕುಡಿದ ಅಮಲಿನಲ್ಲಿದ್ದು, ಯುವಕ ಈ ರೀತಿ ಮಾಡಿಕೊಂಡಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆತ ಮಾನಸಿಕ ಖಿನ್ನತೆಯಲ್ಲಿ ಇದ್ದ ಎಂದು ಸಹ ಹೇಳಲಾಗುತ್ತಿದೆ. ದೇವರನ್ನು ಒಲಿಸಿಕೊಳ್ಳುವ ಮೌಢ್ಯತೆಯಲ್ಲಿ ಯುವಕ ನಾಲಿಗೆ ಕತ್ತರಿಸಿಕೊಂಡಿದ್ದಾನೆ.