ಕರ್ನಾಟಕ

karnataka

ETV Bharat / state

ಕೌಲ್‌ ಬಜಾರ್​ನ ನಿರ್ಬಂಧಿತ ಪ್ರದೇಶದಲ್ಲಿ ರೇಷನ್ ಕಿಟ್ ವಿತರಿಸಿದ ಶಾಸಕ ನಾಗೇಂದ್ರ.. - ರೇಷನ್ ಕಿಟ್ ವಿತರಣೆ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಹಾಗೂ ಸಿಎಲ್​ಪಿ‌ ನಾಯಕ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಈ ದಿನ ಕಂಟೈನ್​ಮೆಂಟ್ ಏರಿಯಾದ ನೂರಾರು ಕುಟುಂಬಗಳಿಗೆ ರೇಷನ್ ಕಿಟ್​ಗಳನ್ನು ವಿತರಿಸಲಾಗುತ್ತಿದೆ.

food items kit Distribution
ರೇಷನ್ ಕಿಟ್ ವಿತರಿಸಿದ ಶಾಸಕ ನಾಗೇಂದ್ರ

By

Published : May 10, 2020, 7:40 PM IST

ಬಳ್ಳಾರಿ:ನಗರದ ಕೌಲ್ ಬಜಾರ್ ಪ್ರದೇಶ ವ್ಯಾಪ್ತಿಯ 26ನೇ ವಾರ್ಡ್​ನಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರು ಆಹಾರ ಪದಾರ್ಥಗಳ ಕಿಟ್​ನ ವಿತರಿಸಿದರು.

ಶಾಸಕ ಬಿ.ನಾಗೇಂದ್ರ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಹಾಗೂ ಸಿಎಲ್​ಪಿ‌ ನಾಯಕ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಈ ದಿನ ಕಂಟೈನ್​ಮೆಂಟ್ ಏರಿಯಾದ ನೂರಾರು ಕುಟುಂಬಗಳಿಗೆ ರೇಷನ್ ಕಿಟ್​ಗಳನ್ನು ವಿತರಿಸಲಾಗುತ್ತಿದೆ. ಕೌಲ್‌ಬಜಾರ್ ವ್ಯಾಪ್ತಿಯ 26ನೇ ವಾರ್ಡ್​ನ ಪ್ರತಿ ಮನೆಗಳಿಗೆ ತೆರಳಿ ಅಂದಾಜು ಸಾವಿರಕ್ಕೂ ಅಧಿಕ ಕಿಟ್​ಗಳನ್ನ ವಿತರಿಸಲಾಗಿದೆ. ಅದರೊಂದಿಗೆ ತರಕಾರಿ, ಹಾಲು,ಮೊಸರನ್ನು ಕೂಡ ವಿತರಿಸಲಾಗಿದೆ ಎಂದರು.

ಕೌಲ್‌ಬಜಾರ್ ಪ್ರದೇಶವನ್ನು ಕಂಟೈನ್​ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಅಗತ್ಯ ವಸ್ತುಗಳ ಕೊರತೆಯಾಗಬಾರದೆಂಬ ಉದ್ದೇಶದೊಂದಿಗೆ ಈ ನಿರ್ಧಾರಕ್ಕೆ ಬರಲಾಗಿದೆ. ವಾರಕ್ಕೆ ಆಗುವಷ್ಟು ಅಗತ್ಯ ವಸ್ತುಗಳನ್ನ ವಿತರಿಸಲಾಗಿದೆ. ವಾರದ ನಂತರ ಬೇಡಿಕೆ ಇದ್ದರೆ ಮತ್ತೆ ಪೂರೈಕೆಗೂ ಸದಾ ಸಿದ್ಧವಿರುವುದಾಗಿ ಅವರು ತಿಳಿಸಿದ್ದಾರೆ.

ABOUT THE AUTHOR

...view details