ಬಳ್ಳಾರಿ: ನಗರದ ಮಾರುತಿ ಕಾಲೋನಿಯಲ್ಲಿ ಜೈನ ಸಮುದಾಯದ ವತಿಯಿಂದ ಮಹಾವೀರ ಜಯಂತಿಯನ್ನ ತಟ್ಟೆ ಬಾರಿಸಿ 9 ನಿಮಿಷಗಳ ಕಾಲ ಹಾಡನ್ನು ಹಾಡಿ ಆಚರಿಸಲಾಯಿತು.
ತಟ್ಟೆ ಬಾರಿಸಿ ಮಹಾವೀರ ಜಯಂತಿ ಆಚರಣೆ! - ತಟ್ಟೆ ಬಾರಿಸಿ ಆಚರಿಸಿದ ಜೈನ ಸಮುದಾಯ.
ಮಾರುತಿ ಕಾಲೋನಿಯ ಜೈನ ಸಮುದಾಯದವರು ಮನೆಯಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಮಹಾವೀರನ ಜಯಂತಿಯನ್ನ ತಟ್ಟೆ ಬಾರಿಸುವ ಮೂಲಕ ಆಚರಿಸಿದ್ದಾರೆ.
ತಟ್ಟೆ ಬಾರಿಸಿ ಆಚರಿಸಿದ ಜೈನ ಸಮುದಾಯ
ಮಾರುತಿ ಕಾಲೋನಿಯ ಜೈನ ಸಮುದಾಯದ ಕೆಲವರ ಮನೆಗಳಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಮಹಾವೀರರ ಪೋಟೋವನ್ನು ಇಟ್ಟು ಸಂಪ್ರದಾಯದ ಪ್ರಕಾರ ಮಹಾವೀರ ಜಯಂತಿ ಆಚರಣೆ ಮಾಡಿದರು.
ಒಟ್ಟಾರೆಯಾಗಿ ಭಾರತ ಲಾಕ್ಡೌನ್ ಆಗಿರುವುದರಿಂದ ತಮ್ಮ ಕಾಲೋನಿಯ ಬಾಲ್ಕನಿಯಲ್ಲಿ ನಿಂತು ತಟ್ಟೆ ಬಾರಿಸುವ ಮೂಲಕ ಜಯಂತಿ ಆಚರಣೆ ಮಾಡಿದ್ದು ವಿಶೇಷವಾಗಿ ಕಂಡುಬಂತು.