ಕರ್ನಾಟಕ

karnataka

ETV Bharat / state

ನೌಕರರ ಮುಷ್ಕರದಿಂದ ಹೊಸಪೇಟೆ ಸಾರಿಗೆ ವಿಭಾಗಕ್ಕೆ 15 ಲಕ್ಷ ರೂ. ನಷ್ಟ - Loss to NEKR TC Hospet Division

ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಬಸ್​ಗಳು ಓಡಾಡದೆ ಎನ್​ಇಕೆಆರ್​ಟಿಸಿ ಹೊಸಪೇಟೆ ವಿಭಾಗಕ್ಕೆ ಭಾರೀ ನಷ್ಟ ಉಂಟಾಗಿದೆ.

Loss to NEKR TC Hospet Division due to staff strike
ಬಸ್​ ಸಂಚಾರವಿಲ್ಲದೆ ಪ್ರಯಾಣಿಕರ ಪರದಾಟ

By

Published : Dec 11, 2020, 5:55 PM IST

ಹೊಸಪೇಟೆ: ಸಾರಿಗೆ ನೌಕರರ ಮುಷ್ಕರದಿಂದ ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (ಎನ್​ಇಕೆಆರ್​ಟಿಸಿ) ಹೊಸಪೇಟೆ ವಿಭಾಗಕ್ಕೆ ಅಂದಾಜು 15 ಲಕ್ಷ ರೂ. ‌ನಷ್ಟವಾಗಿದೆ.

ವಿಭಾಗವು ಈಗಾಗಲೇ ಕೊರೊನಾ ಕಾರಣದಿಂದ ನಷ್ಟ ಅನುಭವಿಸಿತ್ತು. ಇದೀಗ ಸ್ವಲ್ಪ ಚೇತರಿಸಿಕೊಳ್ಳುತ್ತಿರುವ ಹೊತ್ತಿಗೆ ಮುಷ್ಕರ ನಡೆಸುತ್ತಿರುವುದು ಗಾಯದ‌ ಮೇಲೆ ಬರೆ ಎಳೆದಂತಾಗಿದೆ.

ಇದನ್ನೂ ಓದಿ: ಕೊರೊನಾ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಗೆ ಬದ್ಧರಾಗಿದ್ದೇವೆ: ಸಾರಿಗೆ ಸಚಿವ ಸವದಿ

ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಹರಪನಹಳ್ಳಿ, ಕೂಡ್ಲಿಗಿ, ಸಂಡೂರು ಹೊಸಪೇಟೆ ವಿಭಾಗದಲ್ಲಿ ಬರುತ್ತವೆ. ಪ್ರತಿದಿನ 226 ಬಸ್​​ಗಳು ಈ ವಿಭಾಗದಿಂದ ಸಂಚರಿಸುತ್ತವೆ. ಈ ಪೈಕಿ ಇಂದು 184 ಬಸ್​ಗಳು ಮಾತ್ರ ರಸ್ತೆಗಿಳಿದಿವೆ. 40 ಬಸ್ ಸಂಚಾರ ನಡೆಸಿಲ್ಲ. ಹರಪನಹಳ್ಳಿ ಘಟಕದಿಂದ ಒಟ್ಟು 33 ಬಸ್​ಗಳು ಹೋಗುತ್ತವೆ. ಈ ಪೈಕಿ ಇಂದು ನಾಲ್ಕು ಬಸ್​ಗಳು ಮಾತ್ರ ಸಂಚರಿಸಿವೆ,‌ ಉಳಿದ 29 ಬಸ್​ಗಳು ನಿಂತಿವೆ. ಇದು ಹೊಸಪೇಟೆ ವಿಭಾಗಕ್ಕೆ ದೊಡ್ಡ ಹೊಡೆತ ನೀಡಿದೆ.

ಬಸ್​ ಸಂಚಾರವಿಲ್ಲದೆ ಪ್ರಯಾಣಿಕರ ಪರದಾಟ

ಪ್ರಯಾಣಿಕರ ಪರದಾಟ:ಇಂದು ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಹೊಸಪೇಟೆ ವಿಭಾಗದಲ್ಲಿ ಮಾತ್ರ ಬಸ್​ಗಳು ಓಡಾಟ ನಡೆಸಿವೆ. ಬಳ್ಳಾರಿ, ಕೊಪ್ಪಳ, ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ಇತರ ವಿಭಾಗಗಳ ಬಸ್​ಗಳು ರಸ್ತೆಗಳಿದಿಲ್ಲ.‌ ಹೀಗಾಗಿ ಪ್ರಯಾಣಿಕರು ಗಂಟೆಗಟ್ಟಲೆ ಬಸ್ ನಿಲ್ದಾಣದಲ್ಲೇ ಕಾಯುವಂತಾಯಿತು.

ಈಟಿವಿ ಭಾರತದೊಂದಿಗೆ ಹೊಸಪೇಟೆ ವಿಭಾಗದ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಮಾತನಾಡಿ, ದಿಢೀರನೆ ಮುಷ್ಕರ ಮಾಡಿದ್ದರಿಂದ ವಿಭಾಗ ನಷ್ಟ ಅನುಭವಿಸುವಂತಾಗಿದೆ.‌ ನೌಕರರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಕೆಲ ನೌಕಕರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇದು ಸಮಸ್ಯೆ ಬಿಗಡಾಯಿಸುವಂತೆ ಮಾಡಿದೆ ಎಂದು ಹೇಳಿದರು.

ABOUT THE AUTHOR

...view details