ಬಳ್ಳಾರಿ:ವಿದ್ಯುತ್ ತಂತಿ ಗಮನಿಸದೆಅಜಾಗರೂಕತೆಯಿಂದ ಲಾರಿ ಮೇಲೆ ಹತ್ತಿದ್ದ ಚಾಲಕ ಶಾಕ್ ತಗುಲಿ ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಸಂಡೂರು ತಾಲೂಕಿನ ಜಿಂದಾಲ್ ಸ್ಟೀಲ್ಸ್ ವರ್ಕ್ಸ್ನ ಎರಡನೇ ಗೇಟ್ ಬಳಿ ಸೋಮವಾರ ಸಂಭವಿಸಿದೆ. ಸ್ಥಳದಲ್ಲಿ ಜನರಿದ್ದರೂ ಕೂಡ ಅಸಹಾಯಕರಾಗಿ ನೋಡುತ್ತಲೇ ನಿಂತಿದ್ದರು.
ಸಂಡೂರಲ್ಲಿ ಭೀಕರ ಘಟನೆ: ವಿದ್ಯುತ್ ಶಾಕ್ನಿಂದ ಲಾರಿ ಮೇಲೆಯೇ ಪ್ರಾಣಬಿಟ್ಟ ಚಾಲಕ! - ವಿದ್ಯುತ್ ಶಾಕ್
ವಿದ್ಯುತ್ ಶಾಕ್ನಿಂದ ಲಾರಿ ಚಾಲಕ ಮೃತಪಟ್ಟ ಭೀಕರ ಘಟನೆ ಸಂಡೂರು ತಾಲೂಕಿನಲ್ಲಿ ನಡೆದಿದೆ.
ಮೃತ ಚಾಲಕ ಮೊಳಕಾಲ್ಮೂರು ತಾಲೂಕು ರಾಂಪುರದ ಬಳಿಯ ಮೇಗಳಕಣಿವೆ ಗ್ರಾಮದವ ಎಂದು ಗುರುತಿಸಲಾಗಿದೆ. ಸಂಜೆ ಲಾರಿ ನಿಲ್ಲಿಸಿ ಟಾಪ್ ಮೇಲೆ ಹೋಗಿದ್ದ ಚಾಲಕ ಮೇಲ್ಭಾಗದಲ್ಲಿ ಹಾದುಹೋಗಿದ್ದ ಹೈಟೆನ್ಶನ್ ವೈರ್ ಗಮನಿಸದಿರುವುದೇ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಏನೋ ಕೆಲಸ ಮಾಡಲು ಮುಂದಾದಾಗ ಶಾರ್ಟ್ ಸರ್ಕ್ಯೂಟ್ ಆಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಘಟನೆಯ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್ಲೆನಿಸುವಂತಿದೆ. ತೋರಣಗಲ್ಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ:ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನೇ ಕದ್ದ ಕಳ್ಳರು; ಹಲವು ಗ್ರಾಮಗಳಲ್ಲಿ ಕತ್ತಲೆ