ಬಳ್ಳಾರಿ: ರಸ್ತೆಯ ಪಕ್ಕದಲ್ಲಿ ನಿಂತಿದ್ದಾಗ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳಾ ಗ್ರಾಮಾಣಾಭಿವೃದ್ದಿ (ಪಿಡಿಒ) ಅಧಿಕಾರಿವೋರ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮ ಹೊರವಲಯದಲ್ಲಿ ನಡೆದಿದೆ.
ನಿಂತಿದ್ದ ಪಿಡಿಒ ಮೇಲೆ ಹರಿದ ಯಮ ಸ್ವರೂಪಿ ಲಾರಿ... ಮಹಿಳಾ ಅಧಿಕಾರಿ ಸ್ಥಳದಲ್ಲೇ ಸಾವು - undefined
ಯಮಸ್ವರೂಪಿಯಾಗಿ ಬಂದ ಲಾರಿಯೊಂದು ಮಹಿಳಾ ಪಿಡಿಒ ಪ್ರಾಣ ತೆಗೆದಿದೆ. ಲಾರಿ ಹರಿದ ಪರಿಣಾಮ ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
![ನಿಂತಿದ್ದ ಪಿಡಿಒ ಮೇಲೆ ಹರಿದ ಯಮ ಸ್ವರೂಪಿ ಲಾರಿ... ಮಹಿಳಾ ಅಧಿಕಾರಿ ಸ್ಥಳದಲ್ಲೇ ಸಾವು](https://etvbharatimages.akamaized.net/etvbharat/images/768-512-3062705-thumbnail-3x2-lorr.jpg)
ವೆಂಕಟಲಕ್ಷ್ಮಿ (45) ಎಂಬುವರು ಮೃತ ಪಿಡಿಒ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕಲ್ಲಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಕಚೇರಿಗೆ ಗ್ರಾಮಸ್ಥರೆಲ್ಲರೂ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಹಾಗಾಗಿ ಪಿಡಿಒ ಕುಡಿಯುವ ನೀರಿನ ಕೊಳವೆಬಾವಿ ದುರಸ್ತಿಗೆ ಇಡೀ ದಿನ ಗ್ರಾಮದಲ್ಲೇ ಬೀಡು ಬಿಟ್ಟಿದ್ದರು.
ಸಂಜೆ ಹೊತ್ತಿಗೆ ಗ್ರಾಮದ ಹೊರವಲಯದಲ್ಲಿನ ಕಣಿವೆರಾಯ ದೇಗುಲದದ ಬಳಿ ಕೊಳವೆಬಾವಿ ಹತ್ತಿರ ಬೈಕ್ ಮೇಲೆ ನಿಂತಿದ್ದ ವೇಳೆ ಲಾರಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಲಾರಿಯ ಚಕ್ರ ಪಿಡಿಒ ವೆಂಕಟಲಕ್ಷ್ಮಿ ತಲೆಯ ಮೇಲೆ ಹರಿದಿದ್ದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲಾರಿಯನ್ನು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಹೊಸಪೇಟೆ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.