ಬಳ್ಳಾರಿ:ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ನ ಹಿಂದೆ ಕುಳಿತಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ನಗರದ ಮೋತಿ ಸರ್ಕಲ್ ಬಳಿ ನಡೆದಿದೆ.
ಬೈಕ್ಗೆ ಲಾರಿ ಡಿಕ್ಕಿ.. ಮಹಿಳೆ ಸ್ಥಳದಲ್ಲೇ ಸಾವು - ತಮಿಳುನಾಡಿನ ಲಾರಿ
ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
![ಬೈಕ್ಗೆ ಲಾರಿ ಡಿಕ್ಕಿ.. ಮಹಿಳೆ ಸ್ಥಳದಲ್ಲೇ ಸಾವು](https://etvbharatimages.akamaized.net/etvbharat/prod-images/768-512-4038575-thumbnail-3x2-blr.jpg)
ಲಾರಿಯೊಂದು ಬೈಕ್ಗೆ ಡಿಕ್ಕಿ
ನಗರದ ಹೊರವಲಯದ ಅನಂತಪುರ ರಸ್ತೆಯ ಜನತಾನಗರದ ನಿವಾಸಿ ರಾಧಾ(20) ಮೃತ ದುರ್ದೈವಿ. ತನ್ನ ಗಂಡ ಅನಿಲ್‌ಕುಮಾರ್‌ನೊಂದಿಗೆ ಬೈಕ್‌ನಲ್ಲಿ ಪ್ರಯಾಣ ಮಾಡುವಾಗ ತಮಿಳುನಾಡಿನ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ, ಹಿಂಬದಿಯಲ್ಲಿ ಕುಳಿತ ರಾಧಾ ಕೆಳಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪಿದ್ದಾಳೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Aug 4, 2019, 6:55 PM IST