ಬಳ್ಳಾರಿ: 80 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಳ್ಳಾರಿ ಮಹಾನಗರ ಪಾಲಿಕೆಯ ವಲಯ ಕಚೇರಿ-2 ರ ಫಸ್ಟ್ ಗ್ರೇಡ್ ಕಂದಾಯ ನಿರೀಕ್ಷಕ ಅಬ್ದುಲ್ ಖಾದರ್ ಹಾಗೂ ಕೇಸ್ ವರ್ಕರ್ ಚಿನ್ನಯ್ಯ ಎಂಬುವರು ಹಣ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಳ್ಳಾರಿ: ಲೋಕಾಯುಕ್ತರ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ, ಕೇಸ್ ವರ್ಕರ್
ಮನೆಯ ಖಾತೆ ಮಾಡಿ ಕೊಡಲು 80 ಸಾವಿರ ರೂ. ಲಂಚ ಪಡೆಯುವಾಗ ಕಂದಾಯ ನಿರೀಕ್ಷಕ ಹಾಗೂ ಕೇಸ್ ವರ್ಕರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು
ಮನೆಯ ಖಾತೆ ಮಾಡಿ ಕೊಡಲು ಫಾರಂ 2 ಮತ್ತು 3 ನೀಡದೆ ಸತಾಯಿಸಿದ್ದರಲ್ಲದೇ, 80 ಸಾವಿರ ರೂ. ಲಂಚ ನೀಡುವಂತೆಯೂ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಕಿರಣ್ ಎಂಬುವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಬುಧವಾರ ದಲ್ಲಾಳಿಯ ಮೂಲಕ ಲಂಚದ ಹಣ ಸ್ವೀಕರಿಸುವಾಗ ಅಬ್ದುಲ್ ಖಾದರ್ ಮತ್ತು ಚಿನ್ನಯ್ಯ ಅಧಿಕಾರಿಗಳಿಗೆ ಸಿಕ್ಕಿಬಿದ್ದರು. ಆರೋಪಿಗಳನ್ನು ಪಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ:ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ದ್ವಿತೀಯ ದರ್ಜೆ ಸಹಾಯಕ