ಕರ್ನಾಟಕ

karnataka

ETV Bharat / state

ಲಾಕ್ ಡೌನ್ ನಿಯಮ ಉಲ್ಲಂಘಿಸಿ ಬಾರ್​​ನಲ್ಲಿ ಸಂಗ್ರಹಿಸಿಟ್ಟಿದ್ದ 11 ಲಕ್ಷ ರೂ.ಮೌಲ್ಯದ ಮದ್ಯ ಜಪ್ತಿ

ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದ ಮೂರು ಬಾರ್​​ಗಳ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿ ಮದ್ಯದ ಬಾಟಲ್​​​ಗಳನ್ನು ಜಪ್ತಿ ಮಾಡಿದ್ದಾರೆ. ಈ ವೇಳೆ ಮೂವರನ್ನು ಬಂಧಿಸಿದ್ದಾರೆ.

lockdown-violation
ಮೂರು ಬಾರ್​​ಗಳ ಮೇಲೆ ದಾಳಿ

By

Published : Apr 19, 2020, 9:26 AM IST

Updated : Apr 19, 2020, 1:19 PM IST

ಬಳ್ಳಾರಿ: ಲಾಕ್​​ಡೌನ್ ನಿಯಮ ಉಲ್ಲಂಘಿಸಿ ಬಾರ್​​ಗಳಲ್ಲಿ ಸಂಗ್ರಹಿಸಿಟ್ಟಿದ್ದ ಅಂದಾಜು 11ಲಕ್ಷ ರೂಪಾಯಿ ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸಂಡೂರಲ್ಲಿ ಜಪ್ತಿ ಮಾಡಿದ್ದಾರೆ.

ಸಂಡೂರು ಪಟ್ಟಣದ ಬಿಜೆಪಿ ಮುಖಂಡ ಡಿ. ರಾಘವೇಂದ್ರ ಅವರ ಮಾಲೀಕತ್ವದ ರಾಘವೇಂದ್ರ ಬಾರ್​​ನ ಕೆಲಸಗಾರ ವಿ. ನಾಗರೆಡ್ಡಿ, ಗಣಿ ಉದ್ಯಮಿ ಕಾರ್ತಿಕೇಯ ಎಂ, ಘೋರ್ಪಡೆ ಮಾಲೀಕತ್ವದ ಕಾರ್ತಿಕೇಯ ರೆಸಿಡೆನ್ಸಿಯಲ್ಲಿನ ಬಿ. ಮಾರುತಿ ಹಾಗೂ ಶ್ರೀನಿಧಿ ಎಂಟರ್​ಪ್ರೈಸಸ್​​ನ ಬಾರ್​​ನಲ್ಲಿದ್ದ ಶ್ರೀನಿವಾಸ್​ ಎಂಬುವರನ್ನು ಬಂಧಿಸಿ ಅಂದಾಜು 11 ಲಕ್ಷ ರೂಪಾಯಿ ಮೌಲ್ಯದ ಮದ್ಯದ ಬಾಟಲಿ​​ಗಳನ್ನು ವಶಪಡಿಸಿಕೊಂಡಿದ್ದಾರೆ. ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇನ್ನು, ಲಾಕ್ ಡೌನ್ ಹಿನ್ನಲೆಯಲ್ಲಿ ಅಬಕಾರಿ ಇಲಾಖೆಗೆ ಅಕ್ರಮ‌‌ ಮದ್ಯ ಮಾರಾಟದ ದೂರು ಬಂದಿದ್ದರಿಂದ ಈ ಕಾರ್ಯಾಚರಣೆ ನಡೆಸಲಾಗಿದೆ. ಡಿ.ರಾಘವೇಂದ್ರ ಬಾರ್ ನಲ್ಲಿರುವ - 1.14ಲಕ್ಷ ರೂ. ಶ್ರೀನಿಧಿ ಎಂಟರ್ ಪ್ರೈಸಸ್ ಬಾರ್​​ನಲ್ಲಿರುವ 8.90 ಲಕ್ಷ, ಕಾರ್ತಿಕೇಯ ರೆಸಿಡೆನ್ಸಿ ಬಾರ್​​ನಲ್ಲಿರುವ 1.10 ಲಕ್ಷ ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Last Updated : Apr 19, 2020, 1:19 PM IST

ABOUT THE AUTHOR

...view details