ಬಳ್ಳಾರಿ:ತಾರನಗರದಿಂದ ಜಿಂದಾಲ್ಗೆ ಹೋಗುವ ಬಸ್ನಲ್ಲಿ ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿದ್ದು, ಕಂಡು ಬಂದಿದೆ.
ನಿಯಮ ಉಲ್ಲಂಘನೆ: ಬಸ್ನಲ್ಲಿ 80ಕ್ಕೂ ಹೆಚ್ಚುಕಾರ್ಮಿಕರ ರವಾನೆ - Lockdown rule violation Bellary
ತಾರಾನಗರದಿಂದ ಜಿಂದಾಲ್ಗೆ ಹೋಗುವ ಖಾಸಗಿ ಬಸ್ನಲ್ಲಿ 80 ಕ್ಕೂ ಹೆಚ್ಚು ಕಾರ್ಮಿಕರನ್ನು ತುಂಬಿ ರವಾನೆ ಮಾಡಿ ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಪಟ್ಟಂತೆ ವಿಡಿಯೋ ಸಹ ಲಭ್ಯವಾಗಿದೆ.
ಲಾಕ್ಡೌನ್ ನಿಯಮ ಉಲ್ಲಂಘನೆ
ನಗರದ ತಾರಾನಗರದದಿಂದ ಜಿಂದಾಲ್ಗೆ ಹೋಗುವ ಖಾಸಗಿ ಬಸ್ನಲ್ಲಿ 80ಕ್ಕೂ ಹೆಚ್ಚು ಕಾರ್ಮಿಕರನ್ನು ತುಂಬಿ ರವಾನೆ ಮಾಡಿದ್ದು, ಸಂಪೂರ್ಣ ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಲಾಗಿದೆ. ಸರ್ಕಾರದ ನಿಯಮದ ಪ್ರಕಾರ ಕೇವಲ 30 ಜನರನ್ನು ಒಂದು ಬಸ್ನಲ್ಲಿ ಸಾಗಿಸಬಹುದು. ಆದರೆ, ಈ ಬಸ್ನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿಕೊಂಡು ಹೋಗಿ ಲಾಕ್ಡೌನ್ ಉಲ್ಲಂಘಿಸಲಾಗಿದೆ.
ಇನ್ನು ಇದು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಹೇಳಲಾಗುತ್ತಿದೆ.