ಬಳ್ಳಾರಿ:ಸಾರ್ವಜನಿಕರ ಸ್ಥಳದಲ್ಲಿ ಮಾಸ್ಕ್ ಇಲ್ಲದೆ ಮೊದಲನೇ ಬಾರಿಗೆ ಓಡಾಡಿದ್ರೆ 100 ರೂ.ದಂಡ, ಎರಡನೇ ಬಾರಿ ಉಲ್ಲಂಘನೆ ಮಾಡಿದ್ರೆ ₹200 ದಂಡ ಹಾಕಲಾಗುತ್ತದೆ ಎಂದು ಮಹಾನಗರ ಪಾಲಿಕೆಯ ಆಯುಕ್ತೆ ತುಷಾರಮಣಿ ಎಚ್ಚರಿಸಿದ್ದಾರೆ. ವಾರ್ತಾ ಇಲಾಖೆಯ ಬಳ್ಳಾರಿ ವ್ಯಾಟ್ಸ್‌ಆ್ಯಪ್ ಗ್ರೂಪ್ನಲ್ಲಿ ಈ ಬಗ್ಗೆ ತಿಳಿಸಿದ್ದಾರೆ. ಆದರೂ ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದವರಿಂದ ದಂಡ ವಸೂಲಿ ಮಾಡಲಾಗಿದೆ.
ಲಾಕ್ಡೌನ್ ನಿಮಯ ಉಲ್ಲಂಘಿಸಿದವರಿಂದ ದಂಡ ವಸೂಲಿ ಮಾಡಿದ ಪಾಲಿಕೆ.. - Bellary News
ನಿಯಮ ಉಲ್ಲಂಘಿಸಿ ನಗರದ ಮೋತಿ ವೃತ್ತದಲ್ಲಿ ಸಾರ್ವಜನಿಕರ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಂದ ಪಾಲಿಕೆಯ ಹೆಲ್ತ್ ಇನ್ಸ್ಸ್ಪೆಕ್ಟರ್ ಸುಮರಾಣಿ, ಅಮರೇಶ್, ಕಡ್ಲೆ ಬಸವರಾಜ್ 100 ರೂ. ದಂಡ ವಸೂಲಿ ಮಾಡಿದರು. ಹೊಸಪೇಟೆ ನಗರ ಸಭೆಯಿಂದ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿ, ಅಂಗಡಿಗಳಿಗೆ ನೋಟಿಸ್ ಸಹ ಜಾರಿ ಮಾಡಲಾಗಿತ್ತು.
ನಿಯಮ ಉಲ್ಲಂಘಿಸಿ ನಗರದ ಮೋತಿ ವೃತ್ತದಲ್ಲಿ ಸಾರ್ವಜನಿಕರ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಂದ ಪಾಲಿಕೆಯ ಹೆಲ್ತ್ ಇನ್ಸ್ಸ್ಪೆಕ್ಟರ್ ಸುಮರಾಣಿ, ಅಮರೇಶ್, ಕಡ್ಲೆ ಬಸವರಾಜ್ 100 ರೂ. ದಂಡ ವಸೂಲಿ ಮಾಡಿದರು. ಹೊಸಪೇಟೆ ನಗರ ಸಭೆಯಿಂದ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿ, ಅಂಗಡಿಗಳಿಗೆ ನೋಟಿಸ್ ಸಹ ಜಾರಿ ಮಾಡಲಾಗಿತ್ತು. ಆದರೂ ನಿಯಮ ಉಲ್ಲಂಘನೆ ಮಾಡಿ ಓಡಾಡುತ್ತಿದ್ದವರಿಂದ 22,300 ರೂಪಾಯಿ ದಂಡ ವಸೂಲು ಮಾಡಲಾಗಿದೆ.
ಹೂವಿನಹಡಗಲಿ ತಾಲೂಕಿನಲ್ಲಿ ಒಂದು ಗಂಟೆಯಲ್ಲಿ 4 ಸಾವಿರ ಹಾಗೂ ಮರಿಯಮ್ಮನಹಳ್ಳಿಯಲ್ಲಿ 2,600 ರೂ. ದಂಡ ವಸೂಲಿ ಮಾಡಲಾಯಿತು. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಅನಾವಶ್ಯಕವಾಗಿ ರಸ್ತೆಯಲ್ಲಿ ಬೈಕ್ಗಳ ಓಡಾಟ, ರಸ್ತೆಯಲ್ಲಿ ಉಗುಳುವುದು, ಬಯಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದವರಿಗೆ ಒಟ್ಟು 15 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ.