ಬಳ್ಳಾರಿ :ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಗೊಂಡ ಹಿನ್ನೆಲೆ ಹೊಸಪೇಟೆ ನಗರದಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿವೆ.
ಲಾಕ್ ಡೌನ್ ಸಡಿಲಿಕೆ: ಸಹಜ ಸ್ಥಿತಿಯತ್ತ ಹೊಸಪೇಟೆ ನಗರ - ಬಳ್ಖಾರಿಯಲ್ಲಿ ಲಾಕ್ ಡೌನ್ ಸಡಿಲಿಕೆ
ಕಳೆದ ಒಂದುವರೆ ತಿಂಗಳಿನಿಂದ ಮೌನವಾಗಿದ್ದ ಬಳ್ಖಾರಿಯ ಹೊಸಪೇಟೆ ನಗರ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಲಾಕ್ ಡೌನ್ ಸಡಿಲಿಕೆಗೊಂಡ ಹಿನ್ನೆಲೆ ಅಂಗಡಿ ಮುಂಗಟ್ಟುಗಳು ತೆರೆದಿವೆ.
![ಲಾಕ್ ಡೌನ್ ಸಡಿಲಿಕೆ: ಸಹಜ ಸ್ಥಿತಿಯತ್ತ ಹೊಸಪೇಟೆ ನಗರ Lockdown relaxation in Bellary](https://etvbharatimages.akamaized.net/etvbharat/prod-images/768-512-7095050-207-7095050-1588835531342.jpg)
ಸಹಜ ಸ್ಥಿತಿಯತ್ತ ಹೊಸಪೇಟೆ ನಗರ
ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸಲು ಜಿಲ್ಲಾಡಳಿತ ಮಾರ್ಗಸೂಚಿ ಹೊರಡಿಸಿದ್ದು, ಈ ಹಿನ್ನೆಲೆ ಬಹುತೇಕ ಎಲ್ಲಾ ಅಂಗಡಿ ಮುಂಗ್ಗಟ್ಟುಗಳು ತೆರೆಯಲಾಗಿದೆ.
ಸಹಜ ಸ್ಥಿತಿಯತ್ತ ಹೊಸಪೇಟೆ ನಗರ
ಅಲ್ಲದೆ, ನಗರದಲ್ಲಿ ವಾಹನ ಸಂಚಾರ ಕೂಡ ಸಹಜ ಸ್ಥಿತಿಗೆ ಮರಳುತ್ತಿದ್ದು, ಕಳೆದ ಒಂದುವರೆ ತಿಂಗಳಿನಿಂದ ಮೌನವಾಗಿದ್ದ ನಗರ ಈಗ ಮತ್ತೆ ಗಿಜಿಗುಡುತ್ತಿದೆ.