ಬಳ್ಳಾರಿ:ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ 300 ಬಡ ಜನರಿಗೆ ತರಕಾರಿ, ದಿನಸಿ ವಿತರಿಸಲಾಯಿತು.
ಲಾಕ್‌ಡೌನ್ ಹಿನ್ನೆಲೆ ಹಳ್ಳಿಯ 300 ಬಡವರಿಗೆ ಉಚಿತ ತರಕಾರಿ ವಿತರಣೆ.. - ಕೊರೊನಾ ವೈರಸ್
ತಾಲೂಕು ಪಂಚಾಯತ್ ಸದಸ್ಯ ಬಿ ರೇಣುಕಯ್ಯ, ಎಪಿಎಂಸಿ ಸದಸ್ಯರಾದ ಹಗಲೂರು ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಅಗತ್ಯ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಯ್ತು.
ಲಾಕ್ ಡೌನ್: ಹಳ್ಳಿಯ 300 ಜನರಿಗೆ ಉಚಿತ ತರಕಾರಿ ವಿತರಣೆ
ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದ್ದು ದಿನಗೂಲಿ ಮಾಡಿ ದುಡಿದು ತಿನ್ನುವ ಕೈ ಕಟ್ಟಿಹೋಗಿದೆ. ಅಂತಹ 300 ಜನರನ್ನು ಗುರುತಿಸಿ ಸಿರುಗುಪ್ಪ ತಾಲೂಕು ಪಂಚಾಯತಿ ಸದಸ್ಯ ಬಿ. ರೇಣುಕಯ್ಯ ಎಪಿಎಂಸಿ ಸದಸ್ಯರಾದ ಹಗಲೂರು ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಅಗತ್ಯ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಯ್ತು.