ಹೊಸಪೇಟೆ (ವಿಜಯನಗರ):ಕೊರೊನಾ ಸೋಂಕು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಉತ್ತಮವಾಗಿ ಇಳುವರಿ ಬಂದ್ರೂ ಸಹ ರೈತರಿಗೆ ಹಾಕಿದ ಬಂಡವಾಳ ಬರುತ್ತಿಲ್ಲ. ಪರಿಣಾಮ, ರೈತರು ತಾವು ಬೆಳೆದ ಬೆಳೆ ನೋಡಿ ರೈತ ಕಣ್ಣೀರು ಹಾಕುವಂತಾಗಿದೆ.
ದರ ಇಳಿಕೆಯ ಬಿಸಿ:
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕಿತ್ತೂರಿನ ರೈತ ಅಳವುಂಡಿ ನಿಂಗಪ್ಪ 3.45 ಎಕರೆ ಪ್ರದೇಶದಲ್ಲಿ ಪಪ್ಪಾಯ ಬೆಳೆದಿದ್ದರು. ಈ ಬಾರಿ ಉತ್ತಮ ಫಸಲು ಕೂಡಾ ಬಂದಿದೆ. ಲಾಕ್‌ಡೌನ್ ಮುನ್ನ ಒಂದು ಕೆ.ಜಿ. ಪಪ್ಪಾಯಗೆ 14 ರೂ. ರವರೆಗೆ ಮಾರಾಟ ಮಾಡಿದ್ದಾರೆ. ಈಗ ಒಂದು ಕೆ.ಜಿ.ಗೆ 5 ರೂ.ಗೆ ಮಾರಾಟವಾಗುತ್ತಿದೆ. ಅಂದರೆ, 9 ರೂ. ವ್ಯತ್ಯಾಸವಾಗಿದೆ. ಇದನ್ನು ರೈತನಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಲಾಕ್ ಡೌನ್ ಮುಂಚೆ 40 ಟನ್‌ನಷ್ಟು ಪಪ್ಪಾಯ ಮಾರಾಟ ಮಾಡಿದ್ದು, 5 ಲಕ್ಷ ರೂ. ಆದಾಯ ಬಂದಿತ್ತು ಎಂದು ಅವರು ಹೇಳುತ್ತಾರೆ.
ಆದಾಯಕ್ಕೆ ಕುತ್ತು: