ಕರ್ನಾಟಕ

karnataka

ETV Bharat / state

''ಪಾಸಿಟಿವ್​ ಎನರ್ಜಿ ಬರಬೇಕು ಅಂದ್ರೆ ದೇವಾಲಯಗಳು ತೆರೆಯಬೇಕು''

ದೇವಾಲಯಗಳ ಮೇಲೆಯೂ ಲಾಕ್​ಡೌನ್​ ಕರಿನೆರಳು ಬಿದ್ದಿದೆ. ಗಣಿ ನಾಡಿನ ಪ್ರಸಿದ್ಧ ದೇವಾಲಯಗಳ ಸೇವೆ ಸ್ಥಗಿತಗೊಂಡಿದ್ದು, ಅಲ್ಲಿನ ಅರ್ಚಕರು ಸೇರಿದಂತೆ ಸಿಬ್ಬಂದಿ ಬೀದಿಪಾಲಾಗಿದ್ದಾರೆ.

bellary temples
ಬಳ್ಳಾರಿ ದೇವಾಲಯಗಳು

By

Published : May 12, 2020, 9:38 PM IST

ಬಳ್ಳಾರಿ:ಗಣಿನಾಡಿನ ಐತಿಹಾಸಿಕ ಪ್ರಸಿದ್ಧ ದೇಗುಲಗಳಿಗೆ ಹರಿದು ಬರುವ ಲಕ್ಷಾಂತರ ರೂಪಾಯಿಗಳ ಆದಾಯಕ್ಕೆ ಬ್ರೇಕ್​ ಬಿದ್ದಿದೆ. ಇದರಿಂದ ಆಯಾ ದೇಗುಲಗಳಲ್ಲಿ ಪೂಜಾ ಕೈಂಕರ್ಯ ಕೈಗೊಳ್ಳುವ ಅರ್ಚಕರ ಬದುಕು ಮೂರಾಬಟ್ಟೆಯಾಗಿದ್ದು, ಅಕ್ಷರಶಃ ಬೀದಿಪಾಲಾಗಿದ್ದಾರೆ.

ಜಿಲ್ಲೆಯ ಹನ್ನೊಂದು ತಾಲೂಕುಗಳಲ್ಲಿ ದೇವಾಲಯಗಳನ್ನು ಬರುವ ಎ, ಬಿ ಮತ್ತು ಸಿ ಕೆಟಗರಿಯ ದೇಗುಲಗಳನ್ನಾಗಿ ವಿಂಗಡಣೆ ಮಾಡಲಾಗಿದ್ದು, ಎ ಮತ್ತು ಬಿ ಕೆಟಗೆರಿಯ ದೇಗುಲಗಳಲ್ಲಿ ಪೂಜಾ ಕೈಂಕರ್ಯದಲ್ಲಿ ಭಾಗವಹಿಸುವ ಅರ್ಚಕರಿಗೆಲ್ಲರಿಗೂ ವೇತನ ನಿಗದಿ ಮಾಡಿಲ್ಲ. ಸಿ ಕೆಟಗೆರಿಯ ದೇಗುಲಗಳಲ್ಲಿ ಪೂಜಾ ಕೈಂಕರ್ಯ ಕೈಗೊಳ್ಳುವವರಿಗೆ ಆಯಾ ದೇಗುಲಗಳ ಪ್ರತಿಷ್ಠಾನ ಸಮಿತಿ ಸೇರಿದಂತೆ ಇನ್ನಿತರೆ ಆದಾಯದ ಮೂಲಗಳಿಂದ ವೇತನ ನೀಡಲಾಗುತ್ತೆ.

ಬಳ್ಳಾರಿ ದೇವಾಲಯಗಳು

ಈ ಮೂರು ಹಂತದ ದೇಗುಲಗಳಲ್ಲಿ ಕಾರ್ಯನಿರ್ವಹಿಸುವ ಅರ್ಚಕರ ಪಾಡು ಹೇಳತೀರದಾಗಿದೆ. ಇದೀಗ ದೇಗುಲಗಳು ಸಂಪೂರ್ಣವಾಗಿ ಬಂದ್ ಆಗಿರೋದರಿಂದ ಅರ್ಚಕರು ಬಿಡಿಗಾಸನ್ನು‌ ಕೂಡ ದುಡಿಯುತ್ತಿಲ್ಲ. ಇನ್ನು ವಂಶಪಾರಂಪರ್ಯವಾಗಿ ಅರ್ಚಕರಾಗಿರುವವರು ಸಕಾಲದಲ್ಲಿ ತಮ್ಮ ತಮ್ಮ ಮನೆಗಳಿಗೆ ರೇಷನ್ ಪೂರೈಕೆ ಮಾಡಲಾಗದ ಸ್ಥಿತಿಯಲ್ಲಿದ್ದಾರೆ.

ಲಾಕ್​ಡೌನ್ ಎಫೆಕ್ಟ್​​ನಿಂದ ಐತಿಹಾಸಿಕ ಪ್ರಸಿದ್ಧ ಆಯಾ ದೇಗುಲಗಳಲ್ಲಿನ ಹುಂಡಿ ಹಣದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೀಗಾಗಿ ಜಿಲ್ಲೆಯ ಪ್ರಸಿದ್ಧ ದೇಗುಲಗಳ ಹುಂಡಿ ಹಣವೂ ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹಗೊಂಡಿಲ್ಲ.‌ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆಯಬೇಕಿತ್ತು. ಆದರೆ ಈವರೆಗೂ ಕೂಡ ಬಹುತೇಕ ದೇಗುಲಗಳ ಹುಂಡಿ ಎಣಿಕೆಯಾಗಿಲ್ಲ. ‌ಪ್ರಸಿದ್ಧ ಹಂಪಿ ವಿರೂಪಾಕ್ಷೇಶ್ವರ, ಬಳ್ಳಾರಿ ಕನಕದುರ್ಗಮ್ಮ, ಕೋಟೆ ಮಲ್ಲೇಶ್ವರ, ಸಂಡೂರಿನ ಕುಮಾರಸ್ವಾಮಿ, ಕೊಟ್ಟೂರಿನ ಕೊಟ್ಟೂರೇಶ್ವರ, ಕುರುವತ್ತಿಯ ಮಲ್ಲಿಕಾರ್ಜುನ ಸ್ವಾಮಿ, ಹಡಗಲಿಯ ಮೈಲಾರ ಲಿಂಗೇಶ್ವರ, ಸಿರುಗುಪ್ಪದ ಶಂಭು ಲಿಂಗೇಶ್ವರ ಸೇರಿದಂತೆ ಇನ್ನಿತರೆ ದೇಗುಲಗಳು ಇಲ್ಲಿವೆ.

''ಪಾಸಿಟಿವ್ ಎನರ್ಜಿಗೋಸ್ಕರ ದೇಗುಲಗಳು ತೆರೆಯಲಿ''

ಈ ಮಹಾಮಾರಿ ಕೊರೊನಾ ಸೋಂಕಿನಿಂದ ಇಡೀ ದೇಶವ್ಯಾಪಿ ನೆಗೆಟಿವ್ ಎನರ್ಜಿ ಜಾಸ್ತಿಯಾಗಿದ್ದು, ದೇಗುಲಗಳ ಪ್ರಾರಂಭಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಚಿಂತನೆ ನಡೆಸಬೇಕು. ಮಾನಸಿಕ ಒತ್ತಡದಲ್ಲಿ ಸಿಲುಕಿರುವವರಿಗೆ ದೇಗುಲಗಳ ದರ್ಶನ ಭಾಗ್ಯ ಕಲ್ಪಿಸಿದ್ರೆ ಪಾಸಿಟಿವ್ ಎನರ್ಜಿ ಹೆಚ್ಚಾಗಲಿದೆ ಎಂದು ಕನಕದುರ್ಗಮ್ಮ ದೇಗುಲದ ಪ್ರಧಾನ ಅರ್ಚಕ ರಾಜಶೇಖರ ಈಟಿವಿ ಭಾರತ್​​ಗೆ ತಿಳಿಸಿದ್ದಾರೆ.

ABOUT THE AUTHOR

...view details