ಬಳ್ಳಾರಿ:ಲಾಕ್ಡೌನ್ ಪರಿಣಾಮ ಎಲ್ಲಾ ಕ್ಷೇತ್ರಗಳ ಮೇಲೆ ಬಾರಿ ಪರಿಣಾಮ ಬೀರಿದೆ. ಜಿಲ್ಲೆಯಲ್ಲಿರುವ ಹೋಟೆಲ್ಗಳ ಮಾಲೀಕರು ಸಹ ಕೋಟಿಗಟ್ಟಲೇ ನಷ್ಟ ಅನುಭವಿಸುತ್ತಿದ್ದಾರೆ.
ಲಾಕ್ಡೌನ್ ಎಫೆಕ್ಟ್: ಬಳ್ಳಾರಿಯಲ್ಲಿ ಹೋಟೆಲ್ ಉದ್ಯಮಕ್ಕೆ ನೂರಾರು ಕೋಟಿ ನಷ್ಟ! - ಬಳ್ಳಾರಿಯಲ್ಲಿ ಲಾಕ್ಡೌನ್ ಎಫೆಕ್ಟ್
ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಲಾಕ್ಡೌನ್ ವಿಸ್ತರಣೆ ಆದ ಪರಿಣಾಮ ಎಲ್ಲ ವಲಯಗಳಲ್ಲಿ ನಷ್ಟ ಉಂಟಾಗಿದೆ. ಬಳ್ಳಾರಿಯಲ್ಲಿರುವ ಹೋಟೆಲ್ ಮಾಲೀಕರು ಕೋಟಿಗಟ್ಟಲೇ ನಷ್ಟ ಅನುಭವಿಸುತ್ತಿದ್ದಾರೆ.
![ಲಾಕ್ಡೌನ್ ಎಫೆಕ್ಟ್: ಬಳ್ಳಾರಿಯಲ್ಲಿ ಹೋಟೆಲ್ ಉದ್ಯಮಕ್ಕೆ ನೂರಾರು ಕೋಟಿ ನಷ್ಟ! crores of losses to the hotel industry at Bellary](https://etvbharatimages.akamaized.net/etvbharat/prod-images/768-512-6877160-thumbnail-3x2-yada.jpg)
ಜಿಲ್ಲೆಯ ಪ್ರತಿಷ್ಠಿತ ಹೋಟೆಲ್ ದರ್ಶಿನಿ ಹೋಟೆಲ್ನಲ್ಲಿ ಸಂಘಟಿತ 3500 ಮತ್ತು ಅಸಂಘಟಿತ ವಲಯಗಳಲ್ಲಿ 3500 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ಅಂದಾಜು 7 ಸಾವಿರ ಕೂಲಿ ಕಾರ್ಮಿಕರಿದ್ದಾರೆ. ಅಸಂಘಟಿತ ವಲಯದ ಕಾರ್ಮಿಕರಿಗೆ ರೇಷನ್ ಕಿಟ್ಗಳನ್ನು ಹೋಟೆಲ್ ಮಾಲೀಕರು ವಿತರಿಸಿದ್ದಾರೆ. ಸಂಘಟಿತ ವಲಯದ ಕಾರ್ಮಿಕರಿಗೆ ವೇತನ ಸಹಿತ ರೇಷನ್ ಕಿಟ್ಗಳನ್ನು ವಿತರಿಸಿದ್ದಾರೆ.
ಜಿಲ್ಲೆಯಲ್ಲಿ ನಾಲ್ಕು ಸ್ಟಾರ್ ಹೊಟೇಲ್ಗಳು ಸೇರಿದಂತೆ ಎಂಭತ್ತಕ್ಕೂ ಹೆಚ್ಚು ಹೋಟೆಲ್ ಮತ್ತು ರೆಸ್ಟೋರೆಂಟ್ಗಳಿವೆ. ಕಳೆದ ಒಂದೂವರೆ ತಿಂಗಳಿಂದ 350 ರಿಂದ 400 ಕೋಟಿಗೂ ಅಧಿಕ ನಷ್ಟವನ್ನು ಹೋಟೆಲ್ ಮಾಲೀಕರು ಅನುಭವಿಸುತ್ತಿದ್ದಾರೆ. ಕೆಲ ಅಗತ್ಯ ವಸ್ತುಗಳ ಸ್ಟಾಕ್ ಇದ್ದು, ಲಾಕ್ಡೌನ್ ಮುಕ್ತಗೊಂಡ ಬಳಿಕ ಅವುಗಳನ್ನು ಬಳಕೆ ಮಾಡಲು ಬರುವುದಿಲ್ಲ. ಅವೆಲ್ಲ ಹಾಳಾಗುತ್ತವೆ. ಬಾರ್ ಆ್ಯಂಡ್ ರೆಸ್ಟೋರೆಂಟ್ಗಳಲ್ಲಿ ಸಂಗ್ರಹಿಸಿಟ್ಟ ಮದ್ಯದ ಬಾಟಲ್ ಸೇರಿದಂತೆ ಇನ್ನಿತರೆ ಸಾಮಗ್ರಿಗಳೂ ಸಹ ವೇಸ್ಟ್ ಆಗುತ್ತವೆ. ಹೋಟೆಲ್ ಉದ್ಯಮ ಚೇತರಿಸಿಕೊಳ್ಳಲು ಕನಿಷ್ಠ ಒಂದೂವರೆ ವರ್ಷಗಳ ಅವಧಿ ಬೇಕಾಗುತ್ತದೆ ಎಂದು ಈಟಿವಿ ಭಾರತ್ಗೆ ಪೋಲಾ ಪ್ಯಾರಾಡೈಸ್ ಮಾಲೀಕ ವಿಕ್ರಮ್ ಪೋಲಾ ಹೇಳಿದರು.