ಬಳ್ಳಾರಿ :ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಮಾಸದ ಹಬ್ಬ ಶುರುವಾಗಿದೆ. ಉಪವಾಸ ವ್ರತಾಚರಣೆ ಮಾಡುವ ಬಡ ಮುಸ್ಲಿಂ ಬಾಂಧವರಿಗೆ ಕಾಂಗ್ರೆಸ್‌ನ ಮಾಜಿ ಶಾಸಕರೊಬ್ಬರು ಸುಮಾರು 5000 ಇಫ್ತಿಯಾರ್ ಆಹಾರ ಪಾಕೇಟ್ ತಯಾರಿಸಿ ಹಂಚಿಕೆ ಮಾಡಲು ಮುಂದಾಗಿದ್ದಾರೆ.
ಕಾಂಗ್ರೆಸ್‌ನ ಮಾಜಿ ಶಾಸಕರಿಂದ 5000 ಇಫ್ತಿಯಾರ್ ಆಹಾರ ಪಾಕೇಟ್ ವಿತರಣೆ.. - 5000 ಇಫ್ತಿಯಾರ್ ಆಹಾರ ಪಾಕೇಟ್
ಚಿಕನ್ ಕಬಾಬ್, ಬಿರಿಯಾನಿ ಪಾಕೇಟ್‌ಗಳ ಮೇಲೆ ರಂಜಾನ್ ಹಬ್ಬದ ಶುಭಕಾಮನೆಗಳ ಜೊತೆಗೆ, ಎಲ್ಲರೂ ಮನೆಯಲ್ಲಿರಿ.. ಸುರಕ್ಷಿತವಾಗಿರಿ.. ಕೊರೊನಾ ವೈರಸ್ ಹೋಗುವವರೆಗೂ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸೋಣ.. ದೇಶ ಮೊದಲು.. ಎಂಬ ಘೋಷ ವಾಕ್ಯವನ್ನ ಲೇಬಲ್ ಮೇಲೆ ಮುದ್ರಿಸಲಾಗಿದೆ.
ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಜಿ ಶಾಸಕ ಸಿರಾಜ್ ಶೇಖ್ ಅವರು, ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಇಫ್ತಿಯಾರ್ ಆಹಾರ ಪ್ಯಾಕೇಟ್‌ಗಳನ್ನ ರೆಡಿ ಮಾಡಿ ಪ್ರತಿದಿನ 650 ಪ್ಯಾಕೇಟ್‌ಗಳನ್ನ ವಿತರಿಸುತ್ತಿದ್ದಾರೆ. ವಾರಗಳಕಾಲ ಸುಮಾರು 5000 ಪ್ಯಾಕೇಟ್‌ಗಳನ್ನ ಮನೆಮನೆಗೆ ವಿತರಿಸುವ ಪವಿತ್ರ ಕಾರ್ಯಕ್ಕೆ ಮುಂದಾಗಿರೋದು ಮುಸ್ಲಿಂ ಬಾಂಧವರ ಮೆಚ್ಚುಗೆಗೆ ಪಾತ್ರವಾಗಿದೆ.
ಸ್ವತಃ ಮಾಜಿ ಶಾಸಕ ಸಿರಾಜ್ ಶೇಖ್ ಅವರೇ, ಇಫ್ತಿಯಾರ್ ಆಹಾರ ಪಾಕೇಟ್‌ಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಚಿಕನ್ ಕಬಾಬ್, ಬಿರಿಯಾನಿ ಪಾಕೇಟ್‌ಗಳ ಮೇಲೆ ರಂಜಾನ್ ಹಬ್ಬದ ಶುಭಕಾಮನೆಗಳ ಜೊತೆಗೆ, ಎಲ್ಲರೂ ಮನೆಯಲ್ಲಿರಿ.. ಸುರಕ್ಷಿತವಾಗಿರಿ.. ಕೊರೊನಾ ವೈರಸ್ ಹೋಗುವವರೆಗೂ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸೋಣ.. ದೇಶ ಮೊದಲು.. ಎಂಬ ಘೋಷ ವಾಕ್ಯವನ್ನ ಲೇಬಲ್ ಮೇಲೆ ಮುದ್ರಿಸಿ ಜಾಗೃತಿ ಮೂಡಿಸಲಾಗುತ್ತಿದೆ.