ಬಳ್ಳಾರಿ: ನಗರದ ರೇಡಿಯೋ ಪಾರ್ಕ್ ಸರ್ಕಾರಿ ಐಟಿಐ ಕಾಲೇಜು ಮುಂಭಾಗದಲ್ಲಿ ಇಂದು ಸಂಜೆ ಕ್ರಿಕೆಟ್ ಆಟವಾಡಿದ ನಂತರ 50 ಕ್ಕಿಂತ ಹೆಚ್ಚಿನ ಯುವಕರನ್ನೊಳಗೊಂಡ ಗುಂಪು ಜಗಳ ಮಾಡಿಕೊಂಡಿದೆ.
ಬಳ್ಳಾರಿ: ಕ್ರಿಕೆಟ್ ಆಡುವ ಸ್ಥಳೀಯ ಯುವಕರ ಕಿರಿಕ್, ಬುದ್ಧಿವಾದ ಹೇಳಿ ಮನೆಗೆ ಕಳಿಸಿದ ಪೊಲೀಸರು - cricket
ಗಣಿನಾಡು ಬಳ್ಳಾರಿ ನಗರದ ರೇಡಿಯೋ ಪಾರ್ಕ್ ಸರ್ಕಾರಿ ಐಟಿಐ ಕಾಲೇಜು ಮುಂಭಾಗದಲ್ಲಿ ಕ್ರಿಕೆಟ್ ಆಡಲು ಬಂದಿದ್ದ ಯುವಕರು ಆಟ ಮುಗಿಸಿದ ನಂತರ ಕಿರಿಕ್ ಮಾಡಿಕೊಂಡಿರುವ ಘಟನೆ ನಡೆದಿದೆ.
ಕ್ರಿಕೆಟ್ ಆಡುವ ಸ್ಥಳೀಯ ಯುವಕರಿಂದ ಗಲಾಟೆ
ಕೆಲ ಯುವಕರ ಕುಡಿತ ಹಾಗೂ ಕ್ರಿಕೆಟ್ ಬೆಟ್ಟಿಂಗ್ಈ ಜಗಳಕ್ಕೆ ಕಾರಣ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೊರೊನಾ ವೈರಸ್ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ದಿನೇ ದಿನೆ ಹೆಚ್ಚಾಗುತ್ತಿದೆ. ಆದರೆ ಪ್ರತಿನಿತ್ಯ ನೂರಾರು ಯುವಕರು ಈ ಕಾಲೇಜು ಆವರಣದಲ್ಲಿ ಬೆಳಗ್ಗೆ, ಸಂಜೆ ಕ್ರಿಕೆಟ್ ಆಟವಾಡಲು ಸೇರಿರುತ್ತಾರೆ. ಇವರಿಗೆ ಯಾರೂ ಹೇಳೋರು ಇಲ್ಲ. ಇಲ್ಲಿಯ ಯುವಕರಿಗೆ ಪೊಲೀಸರ ಭಯವಿಲ್ಲದಂತಾಗಿದೆ ಎನ್ನುತ್ತಾರೆ ಸ್ಥಳೀಯ ಜನರು.
ಈ ಸಮಯದಲ್ಲಿ ನಗರದ ಕೌಲ್ ಬಜಾರ್ ಠಾಣೆಯ ಪೊಲೀಸರು ಆಗಮಿಸಿ ಗಲಾಟೆ ಮಾಡುತ್ತಿದ್ದ ಯುವಕರಿಗೆ ಬುದ್ಧಿವಾದ ಹೇಳಿ ಮನೆಗೆ ಕಳಿಸಿದ್ದಾರೆ.