ಕರ್ನಾಟಕ

karnataka

ETV Bharat / state

ರೈತರ ಬಳಿ ಲಂಚ ಪಡೆದ ಆರೋಪ: ಎಸಿಬಿ ಬಲೆಗೆ ಬಿದ್ದ ಲೈನ್​ಮ್ಯಾನ್​ - ವೆಂಕರೆಡ್ಡಿ ಕ್ಯಾಂಪ್​

ರೈತರ ಜಮೀನಿಗೆ ಟ್ರಾನ್ಸ್​ಫಾರ್ಮರ್​ ಕೂರಿಸಲು ಲಂಚ ಕೇಳಿದ ಆರೋಪದಡಿ ಲೈನ್​ಮ್ಯಾನ್​ವೋರ್ವ​ನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಲೈನ್​ಮನ್

By

Published : Aug 29, 2019, 8:06 AM IST

ಬಳ್ಳಾರಿ:ರೈತರ ಜಮೀನಿಗೆ ಟ್ರಾನ್ಸ್​ಫಾರ್ಮರ್ ಕೂರಿಸಲು ಲಂಚ ಕೇಳಿದ ಆರೋಪದಡಿ ಲೈನ್​ಮ್ಯಾನ್​​ವೋರ್ವನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ ತಾಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದ ವೆಂಕರೆಡ್ಡಿ ಕ್ಯಾಂಪ್​ನಲ್ಲಿ ರೈತ ಬಿ. ಸತ್ಯನಾರಾಯಣ ಮತ್ತು ಐವರು ಸೇರಿ ಒಂದು ಟ್ರಾನ್ಸ್​ಫಾರ್ಮರ್​ ಕೂರಿಸಿಕೊಳ್ಳಲು ಜೆ.ಇಗೆ ಮನವಿ ಸಲ್ಲಿಸಿದ್ದರು.

63 ಕೆವಿ ಸಾಮರ್ಥ್ಯ ಇರುವ ಟಿಸಿಗೆ 8 ಜನ ರೈತರು ಮೋಟಾರ್ ಬಳಸಿದ್ದರಿಂದ ಕರೆಂಟ್ ಪೂರೈಸುವಾಗ ಮೋಟಾರ್ ಬಂದ್​ ಆಗಿದ್ದವು. ನಂತರ ರೈತರು ಜೆ.ಇ ಬಳಿ ಮಾತಮಾಡಿದ್ದರು. ಅದಕ್ಕೆ ಅವರು 100 ಕೆವಿ ಸಾಮರ್ಥ್ಯ ಇರುವ ಟಿಸಿ ಹಾಕಿಕೊಳ್ಳಬೇಕು, ಟಿಸಿ ಬರಲು ಮೂರು ತಿಂಗಳಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಲೈನ್​ಮ್ಯಾನ್ ಬಳಿ ಮಾತನಾಡಿ ಎಂದು ಹೇಳಿದ್ದರಂತೆ.

ಲೈನ್​ಮ್ಯಾನ್​ಗೆ ಮಾತನಾಡಿಸಿದಾಗ ಹೊಸದಾಗಿ ಅಕ್ರಮ-ಸಕ್ರಮದಲ್ಲಿ ಬಂದ ಇಬ್ಬರು ರೈತರಿಗೆ ತಲಾ 10,000 ಸಾವಿರ ನೀಡಿ ಮತ್ತು ಆರು ಜನ ರೈತರು ತಲಾ 6,500 ರೂಪಾಯಿ ನೀಡಿ ಎಂದು ಲಂಚದ ಬೇಡಿಕೆಯನ್ನು ಲೈನ್​ಮ್ಯಾನ್​ ಇಟ್ಟಿದ್ದ​ ಎಂದು ತಿಳಿದುಬಂದಿದೆ.

ಟಿಸಿ ಯಿಂದ ಈ ಎಂಟು ಜನ ರೈತರಿಗೆ ಕರೆಂಟ್ ಪೂರೈಸಿದ್ದೇನೆ. ಎಲ್ಲರೂ ಹಣ ನೀಡಿದ್ದಾರೆ. ನೀನು ( ಬಿ. ಸತ್ಯನಾರಾಯಣ) ಸಹ 6,500 ರೂಪಾಯಿ ನೀಡಿ ಎಂದು ಲಂಚದ ಬೇಡಿಕೆ ಇಟ್ಟಿದ್ದನಂತೆ. ಹಣ ನೀಡದ ಕಾರಣ ಬುಧವಾರ ಬಿ.ಸತ್ಯನಾರಾಯಣ ಜಮೀನಿನಲ್ಲಿನ ವಿದ್ಯುತ್​ ಸಂಪರ್ಕವನ್ನು ಲೈನ್​ಮ್ಯಾನ್​ ಕಟ್ ಮಾಡಿದ್ದನಂತೆ.

ಆಗ ರೈತ ಸತ್ಯನಾರಾಯಣ ಎಸಿಬಿ ಗೆ ದೂರು ನೀಡಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದರು. ಈ ಕಾರ್ಯಾಚರಣೆಯಲ್ಲಿ ಬಳ್ಳಾರಿ ಎಸಿಬಿ ಇನ್​ಸ್ಪೆಕ್ಟರ್ ಮತ್ತು ಹೆಡ್ ಕಾನ್​ಸ್ಟೇಬಲ್ ಸೇರಿದಂತೆ ಸಿಬ್ಬಂದಿ ಇದ್ದರು.

ABOUT THE AUTHOR

...view details