ಬಳ್ಳಾರಿ: ಜಿಲ್ಲೆಯಲ್ಲಿ ಪ್ರವಾಹ ತಗ್ಗಿದರೂ ಕೂಡ ಜನಜೀವನ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ಮನೆಗಳ ಮುಳುಗಡೆಯಿಂದ ಜನರ ಸಮಸ್ಯೆಗಳು ಇನ್ನೂ ಬಗೆಹರಿಯುತ್ತಿಲ್ಲ. ಹಗರಿ ನದಿ ಪ್ರವಾಹದಿಂದ ಬಳ್ಳಾರಿ ತಾಲೂಕಿನ ಬಸರಕೋಡು ಗ್ರಾಮ ಜಲಾವೃತವಾಗಿತ್ತು. ಆದರೆ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿಯಿಂದುಂಟಾದ ಹಾನಿ, ಅವ್ಯವಸ್ಥೆ ಇನ್ನೂ ಹಾಗೆಯೇ ಇದೆ.
ಗ್ರಾಮದಲ್ಲಿ ಉಂಟಾದ ಪ್ರವಾಹದಿಂದ ಜನರು ಮನೆ ಮಹಡಿ ಮೇಲೆ ಕುಳಿತಿದ್ದರು. ಹರಗೋಲು ಮೂಲಕ ಮನೆಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಇವತ್ತು ಪ್ರವಾಹ ತಗ್ಗಿದ್ದರಿಂದ ಟ್ರ್ಯಾಕ್ಟರ್ ಮೂಲಕ ಮನೆ- ಮನೆಗೆ ಊಟ ವಿತರಣೆ ಮಾಡಲಾಗಿದೆ. ಗ್ರಾಮದ ತುಂಬೆಲ್ಲಾ ಕೆಸರು ಗದ್ದೆಯಾಗಿದ್ದರಿಂದ ಟ್ರ್ಯಾಕ್ಟರ್ ಮೂಲಕ ಊಟ ವಿತರಣೆ ಮಾಡಲಾಗಿದೆ. ಬಸರಕೋಡು ಗ್ರಾಮದಲ್ಲಿ ಜಿಲ್ಲಾಡಳಿತದಿಂದ ಕಾಳಜಿ ಕೇಂದ್ರ ಆರಂಭಿಸಲಾಗಿದೆ.
ಪ್ರವಾಹ ತಗ್ಗಿದರೂ ಸಹಜ ಸ್ಥಿತಿಗೆ ಬರದ ಬಳ್ಳಾರಿ ಜನಜೀವನ ಆಂಧ್ರದಿಂದ ವೇದಾವತಿ ನದಿಗೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ಮಳೆ ನೀರಿನಿಂದ ಜಲಾವೃತಗೊಂಡಿದ್ದ ತಾಲೂಕಿನ ಬಸರಕೋಡು ಗ್ರಾಮದ ಮನೆಗಳಿಗೆ ಮಳೆನೀರು ನುಗ್ಗಿ ತೀವ್ರ ಸಮಸ್ಯೆಯಲ್ಲಿದ್ದ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳಿಗೆ ಗ್ರಾಮದ ಸರ್ಕಾರಿ ಶಾಲೆ ಮತ್ತಿತರ ಕಡೆಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಉಳಿದವರು ಗ್ರಾಮದ ಸಂಬಂಧಿಕರ ಮನೆಗಳಲ್ಲಿ ಉಳಿದುಕೊಂಡಿದ್ದಾರೆ.
ಆಂಧ್ರಪ್ರದೇಶದ ರಾಯದುರ್ಗ ಭೈರವಾನಿತಿಪ್ಪ ನದಿಯಿಂದ ಸತತ ಮೂರು ದಿನಗಳಿಂದ 36 ಸಾವಿರ ಕ್ಯೂಸೆಕ್ ನೀರು ವೇದಾವತಿ ನದಿಗೆ ಬಿಡಲಾಗಿದ್ದು, ಮೋಕಾ, ಬಸರಕೋಡು ಸೇರಿದಂತೆ ಹಗರಿದಂಡೆಯ ಹತ್ತಾರು ಹಳ್ಳಿಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಯಿತು. ವೇದಾವತಿ ನದಿಯಿಂದ ಬಸರಕೋಡು ಗ್ರಾಮಕ್ಕೆ ಭಾರಿ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಸುಮಾರು 150ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಕುಟುಂಬ ಸದಸ್ಯರು ನಿರಾಶ್ರಿತರಾಗಿದ್ದರು.
ಪ್ರವಾಹ ತಗ್ಗಿದರೂ ಸಹಜ ಸ್ಥಿತಿಗೆ ಬರದ ಬಳ್ಳಾರಿ ಜನಜೀವನ ಗ್ರಾಮದ ಓಣಿಗಳಲ್ಲಿ ನಡುಮಟ್ಟದಲ್ಲಿ ಮಳೆನೀರು ಹರಿದಿದ್ದರಿಂದ ಗ್ರಾಮಸ್ಥರು ಭೀತಿಗೊಂಡಿದ್ದರು. ನೀರಿನಲ್ಲಿ ಸಿಲುಕಿದ್ದ ವೃದ್ಧರು, ಮಕ್ಕಳನ್ನು ಬೋಟ್ಗಳಿಂದ ಗ್ರಾಮದ ಹೊರವಲಯದ ಕಾಳಜಿ ಕೇಂದ್ರಕ್ಕೆ ಸಾಗಿಸಲಾಗಿತ್ತು. ಭಾರೀ ಪ್ರಮಾಣದ ನೀರು ಹರಿಯುವಿಕೆಯಿಂದಾಗಿ ಮೋಕಾ ಹೋಬಳಿಯ ಸಾವಿರಾರು ಎಕರೆ ಪ್ರದೇಶದ ಭತ್ತ, ಹತ್ತಿ, ಮೆಣಸಿನಕಾಯಿ, ಮೆಕ್ಕೆಜೋಳ, ಸೂರ್ಯಕಾಂತಿ, ಸಜ್ಜೆ, ಜೋಳ ಸೇರಿದಂತೆ ತೋಟಗಾರಿಕೆ ಬೆಳೆಗಳು ಜಲಾವೃತಗೊಂಡಿದ್ದವು. ಇದರಿಂದ ಭಾಗಶಃ ಬೆಳೆನಷ್ಟದ ಭೀತಿ ಎದುರಾಗಿತ್ತು.
ಪ್ರವಾಹ ತಗ್ಗಿದರೂ ಸಹಜ ಸ್ಥಿತಿಗೆ ಬರದ ಬಳ್ಳಾರಿ ಜನಜೀವನ ಬಸರಕೋಡು ಗ್ರಾಮದಲ್ಲಿ ದನಕರುಗಳು ಮೇವಿಗಾಗಿ ಪರಿತಪಿಸುತ್ತಿದ್ದಾರೆ. ಕಳೆದ 4-5 ದಿನಗಳಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಮೇವಿನ ಬಣವೆಗಳು ಹಗರಿ ನದಿಯ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿವೆ. ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಹೇಳಿದ್ದ ಜಿಲ್ಲಾಡಳಿತ ಇದುವರೆಗೆ ಮೇವು ಪೂರೈಕೆ ಮಾಡಿಲ್ಲ. ಗ್ರಾಮಸ್ಥರು ಜಾನುವಾರುಗಳ ಮೂಕರೋಧನೆ ಕಂಡು ಮರುಕ ಪಡುತ್ತಿದ್ದಾರೆ.
ಇದನ್ನೂ ಓದಿ:ಕಲಬುರಗಿಯಲ್ಲಿ ವರುಣನ ಅಬ್ಬರ: ಹಲವಡೆ ಸಂಪರ್ಕ ಕಡಿತ, ಶಾಲಾ ಮಕ್ಕಳು, ರೈತರು ತತ್ತರ