ಬಳ್ಳಾರಿ:ಸ್ವಂತ ತಂಗಿಯನ್ನೇ ಕೊಂದ ಅಣ್ಣನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಸಿರುಗುಪ್ಪ ತಾಲೂಕಿನ ನಾಗರಾಜ ಎಂಬಾತ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬುದ್ಧಿವಾದ ಹೇಳಲು ಬಂದ ತಂಗಿ ಶಕುಂತಲಾ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದಿದ್ದನು.
ಸರಿಯಾಗಿ ಕೆಲಸ ಮಾಡದೇ ಖಾಲಿ ತಿರುಗುತ್ತಿದ್ದ ನಾಗರಾಜನ ಹೆಂಡತಿ ಜಗಳ ಮಾಡಿ ತವರು ಸೇರಿದ್ದಳು. ನಿನ್ನ ಬೇಜವಾಬ್ದಾರಿಯೇ ಈ ಸಮಸ್ಯೆಗೆಲ್ಲಾ ಕಾರಣ ಎಂದು ಬುದ್ಧಿ ಮಾತು ಹೇಳಿದ ತಂಗಿ ಶಕುಂತಲಾಳನ್ನು ಕೊಂದು ಈತ ಈಗ ಜೈಲು ಸೇರಿದ್ದಾನೆ. 2017ರಲ್ಲಿ ಈ ಕೊಲೆ ನಡೆದಿತ್ತು. ಆರೋಪಿ ಮೇಲೆ ಸಿರುಗುಪ್ಪದಲ್ಲಿ ಕೇಸು ದಾಖಲಾಗಿತ್ತು. ಆರೋಪಿ ವಿರುದ್ಧ ಸಿರುಗುಪ್ಪ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಸೀಟ್ ಸಲ್ಲಿಸಿದ್ದರು.