ಬಳ್ಳಾರಿ: ಭಾರತ ಲಾಕ್ಡೌನ್ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ಕೇಳೋಣ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮಾತನ್ನು ಕೇಳೋಣ: ಶಾಸಕ ಸೋಮಶೇಖರ್ ರೆಡ್ಡಿ - ಶಾಸಕ ಜಿ. ಸೋಮಶೇಖರ್ ರೆಡ್ಡಿ ಹೇಳಿಕೆ
ಲಾಕ್ಡೌನ್ ಪರಿಣಾಮ ಬೇರೆ ದೇಶಗಳಿಗೆ ಹೋಲಿಸಿದರೆ ಕೊರೊನಾ ಸೋಂಕು ಧೃಡಪಟ್ಟಿರುವವರ ಸಂಖ್ಯೆ ಭಾರತದಲ್ಲಿ ಕಡಿಮೆ ಇದೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಹೇಳಿದರು.
ಶಾಸಕ ಜಿ. ಸೋಮಶೇಖರ್ ರೆಡ್ಡಿ
ಬಿ.ಎಸ್ ಯಡಿಯೂರಪ್ಪ ಅವರದ್ದೇನೂ ತಪ್ಪಿಲ್ಲ: ಭಾರತ ಲಾಕ್ಡೌನ್ ಆಗಿರುವುದರಿಂದ ಬಡ ಕೂಲಿ ಕಾರ್ಮಿಕರಿಗೆ ದಿನಗೂಲಿ ಇಲ್ಲದೇ ಹಸಿವಿನಿಂದ ಇರುವುದು ಕಷ್ಟವಾಗುತ್ತದೆ ಎಂಬ ಭಾವನೆಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಡಿಲಿಕೆ ಆದೇಶ ಹೊರಡಿಸಿದ್ರು. ಆದ್ರೆ ಮತ್ತೆ ಕೆಲ ವೃತ್ತಿಪರರು ಮತ್ತು ಜನರು ಲಾಕ್ಡೌನ್ ಸಡಿಲಿಕೆ ಬೇಡ, ಮುಂದುವರೆಸಿ ಎಂದು ಹೇಳಿದ್ದಾರೆ. ಹಾಗಾಗಿ ಲಾಕ್ಡೌನ್ ಮೇ. 3ರವರೆಗೂ ಮುಂದೆವರೆಯುತ್ತದೆ ಎಂದರು.