ಹೊಸಪೇಟೆ: ಶ್ರೀರಾಮ ಮಂದಿರ ನಿರ್ಮಾಣಕಾರ್ಯವುಸುವರ್ಣ ಅಕ್ಷರದಲ್ಲಿ ಬರೆದಿಟ್ಟುಕೊಳ್ಳುವ ಸೌಭಾಗ್ಯ ನಮಗೆಲ್ಲರಿಗೂ ತಂದುಕೊಟ್ಟಿದೆ. ಇದನ್ನು ಯಾರೂ ಕಳೆದುಕೊಳ್ಳುವುದು ಬೇಡ ಎಂದು ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಶ್ರೀರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಸಾಕಷ್ಟು ವರ್ಷಗಳಿಂದ ಕಾಯಲಾಗಿತ್ತು. ಈಗ ಆ ಶುಭ ಗಳಿಗೆ ಬಂದಿದೆ, ಎಲ್ಲರ ಅಳಿಲು ಸೇವೆ ಇರಲಿ. ಇದು ಇತಿಹಾಸದ ಪುಟದಲ್ಲಿ ಸೇರಲಿದೆ. ಈ ಹಿಂದೆ ಸೊಮೇಶ್ವರ ದೇವಸ್ಥಾನ ನಿರ್ಮಾಣದಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಪಾತ್ರ ಹಿರಿದಾಗಿತ್ತು. ಅವರನ್ನು ಇಂದಿಗೂ ನೆನಪು ಮಾಡಿಕೊಳ್ಳುತ್ತೇವೆ ಎಂದರು.