ಬಳ್ಳಾರಿ: ಪೊಲೀಸ್ ಇಲಾಖೆಯಲ್ಲಿ ಪ್ರತಿದಿನ ಒಂದೊಂದು ರೀತಿಯ ಸವಾಲು ಬರುತ್ತವೆ ಅದನ್ನು ಎದುರಿಸುವ ಚಾಣಾಕ್ಷ ನಿಮ್ಮಲ್ಲಿ ಇರಬೇಕು ಮತ್ತು ಪೊಲೀಸ್ ಇಲಾಖೆಯಲ್ಲಿ ಕಲಿಕೆ ನಿರಂತರವಾಗಿರಲಿ ಎಂದು ಎಸ್.ಪಿ ಲಕ್ಷ್ಮಣ ನಿಂಬಳಗಿ ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ಬಳ್ಳಾರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ 12ನೇ ತಂಡದ ನಾಗರೀಕ ಮಹಿಳಾ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ ನಡೆಯಿತು. ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ 12ನೇ ತಂಡದ ನಾಗರೀಕ ಮಹಿಳಾ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
12ನೇ ತಂಡದ ಈ ತರಬೇತಿಯಲ್ಲಿ 85 ಮಹಿಳಾ ಪ್ರಶಿಕ್ಷಣಾರ್ಥಿಗಳು ತರಬೇತಿಯನ್ನು ಪಡೆದಿದ್ದಾರೆ. ಪ್ರಾಂಶುಪಾಲರಾಗಿ ಲಾವಣ್ಯ ಕಾರ್ಯವನ್ನು ನಿರ್ವಹಿಸಿದ್ದಾರೆ. ಬಳ್ಳಾರಿ ಸಶಸ್ತ್ರ ಪಡೆಯ ಮೈದಾನದಲ್ಲಿ ಇದುವರೆಗೂ 1077 ಸಿಪಿಸಿ, 107 ಎಪಿಸಿ ಪೊಲೀಸರು ತರಬೇತಿಯನ್ನು ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಪೊಲೀಸ್ ಮಹಾ ನಿರೀಕ್ಷಕರಾದ ಎಂ.ನಂಜುಂಡ ಸ್ವಾಮಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕರು, ಬಿ.ಎಸ್ ಲಾವಣ್ಯ, ಸಿಇಒ ನಿತೀಶ್ ಕುಮಾರ್ ಮತ್ತು ಮಹಿಳಾ ಪೊಲೀಸರ ಪೋಷಕರು ಹಾಜರಿದ್ದರು.