ಕರ್ನಾಟಕ

karnataka

ETV Bharat / state

ಬಳ್ಳಾರಿ: ಐತಿಹಾಸಿಕ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ.. - ಬಳ್ಳಾರಿಯಲ್ಲಿ ಚಿರತೆ ಪ್ರತ್ಯಕ್ಷ

ಐತಿಹಾಸಿಕ ಗುಡ್ಡದ ಮೇಲೆ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ.

bly_01_chira
ಐತಿಹಾಸಿಕ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ

By

Published : Oct 3, 2022, 9:49 PM IST

ಬಳ್ಳಾರಿ: ಕಳೆದ ಎರಡು ತಿಂಗಳ ಹಿಂದೆ ನಗರದ ಐತಿಹಾಸಿಕ ಗುಡ್ಡದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಇದೀಗ ಅದೇ ಗುಡ್ಡದಲ್ಲಿ ಮತ್ತೇ ಪ್ರತ್ಯಕ್ಷವಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ.

ಇದೇ ಬೆಟ್ಟದಲ್ಲಿ ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡಿತ್ತು. ಚಿರತೆ ಬಂಡೆಯೊಂದರ ಮೇಲೆ ಕುಳಿತಿದ್ದ ವಿಡಿಯೋ ಚಿತ್ರಿಕರಿಸಿ ಕೆಲವರು ಜಾಲತಾಣಗಳಲ್ಲಿ ಹಾಕಿದ್ದರು. ಆನಂತರ, ಅರಣ್ಯ ಇಲಾಖೆ ಅಧಿಕಾರಿಗಳು ಡ್ರೋನ್​ ಕ್ಯಾಮರಾದ ಮೂಲಕ ಚಿರತೆ ಇರುವ ಸ್ಥಳ ಪತ್ತೆ ಹಚ್ಚುವ ಪ್ರಯತ್ನ ನಡೆಸಿದ್ದರು.

ಐತಿಹಾಸಿಕ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ

ಅಲ್ಲದೇ ಎರಡು ಬೋನುಗಳನ್ನು ತರಿಸಿ ಚಿರತೆ ಕಾಣಿಸಿಕೊಂಡಿದ್ದ ಸ್ಥಳಗಳಲ್ಲಿ ಇರಿಸಿದ್ದರು. ಆದರೆ, ಚಿರತೆ ಮಾತ್ರ ಬೋನಿಗೆ ಬಿದ್ದಿರಲಿಲ್ಲ. ಇನ್ನು ಚಿರತೆ ಪ್ರತ್ಯಕ್ಷವಾದ ಪ್ರದೇಶಗಳಲ್ಲಿ ನಾಯಿಗಳು ಚಿರತೆ ಪಾಲಾಗಿದ್ದು, ಇದರಿಂದ ಜನರಲ್ಲಿ ಆತಂಕ ಮನೆ ಮಾಡಿದ್ದು, ಚಿರತೆ ಯಾವ ಸಮಯದಲ್ಲಿ ತಮ್ಮ ಮೇಲೆ ದಾಳಿ ಮಾಡುತ್ತದೊ ಎಂದು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.

ಇನ್ನು ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಶಕ್ತವಾಗಿದೆ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿ ಬರುತ್ತಿವೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಚಿರತೆ ಸೆರೆಗಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಇದನ್ನೂ ಓದಿ:ಬಳ್ಳಾರಿ: ಮರೆಯಾಗಿದ್ದ ಚಿರತೆ ಡ್ರೋನ್​ನಲ್ಲಿ ಸೆರೆ, ಮುಂದುವರೆದ ಕಾರ್ಯಾಚರಣೆ

ABOUT THE AUTHOR

...view details