ಕರ್ನಾಟಕ

karnataka

ETV Bharat / state

ಎರಡು ತಿಂಗಳಿಂದ ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಬಿತ್ತು ಬೋನಿಗೆ! - ಬಳ್ಳಾರಿ ಜಿಲ್ಲೆಯ ಸಂಡೂರು

ಕಳೆದ ಎರಡು ತಿಂಗಳಿಂದ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದಟ್ಟ ಅರಣ್ಯ ಪ್ರದೇಶದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಚಿರತೆ ಬೋನಿಗೆ ಬಿದ್ದಿದೆ.

Bellary
ಎರಡು ತಿಂಗಳಿಂದ ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಬಿತ್ತು ಬೋನಿಗೆ..!

By

Published : Jul 20, 2020, 11:44 AM IST

ಬಳ್ಳಾರಿ:ಜಿಲ್ಲೆಯ ಸಂಡೂರು ತಾಲೂಕಿನ ದಟ್ಟ ಅರಣ್ಯ ಪ್ರದೇಶದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಚಿರತೆಯೊಂದು ಬೋನಿಗೆ ಬಿದ್ದಿದ್ದು, ಇದೀಗ ಸಂಡೂರಿನ ರೈತರು, ಕೃಷಿ ಕೂಲಿ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ಎರಡು ತಿಂಗಳಿಂದ ಈ ಚಿರತೆ ಆಗಾಗ ದಟ್ಟ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ಕೃಷಿ ಕೂಲಿಕಾರರು, ರೈತರು ಭಯಭೀತರಾಗಿದ್ದರು. ರೈತರ ಮನವಿ‌‌ ಮೇರೆಗೆ ಅರಣ್ಯ ಇಲಾಖೆಯು ಅಲ್ಲಲ್ಲಿ ಬೋನ್​ಗಳನ್ನ ಇಟ್ಟಿತ್ತಾದ್ರೂ ಎನ್ಎಂಡಿಸಿ ಮೈನಿಂಗ್ ಕಂಪನಿಯ ಸುತ್ತಲಿನ ಪ್ರದೇಶದಲ್ಲಿರಿಸಿದ್ದ ಬೋನಿನಲ್ಲಿ ಚಿರತೆ ಬಿದ್ದಿದೆ.

ಚಿರತೆ ಬೋನಿಗೆ ಬಿದ್ದಿರುವ ಮಾಹಿತಿ ಪಡೆದುಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸ್ಥಳಕ್ಕಾಗಮಿಸಿ ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ABOUT THE AUTHOR

...view details