ಬಳ್ಳಾರಿ:ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾಕುಬಾಳು ಗ್ರಾಮ ಹೊರವಲಯದ ಕುರಿಹಟ್ಟಿಯ ಮೇಲೆ ಚಿರತೆ ದಾಳಿ ನಡೆಸಿದ್ದರ ಪರಿಣಾಮ ಹತ್ತಾರು ಕುರಿಗಳ ಸಾವನ್ನಪ್ಪಿವೆ.
ಚಿರತೆ ದಾಳಿಗೆ ಹತ್ತಾರು ಕುರಿಗಳು ಬಲಿ - ಬೊಳುಬಾಯಿ ಹನುಮಂತಪ್ಪ
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾಕುಬಾಳು ಗ್ರಾಮ ಹೊರವಲಯದ ಕುರಿಹಟ್ಟಿಯ ಮೇಲೆ ಚಿರತೆ ದಾಳಿ ನಡೆಸಿದ್ದರ ಪರಿಣಾಮ ಕಾಕುಬಾಳು ಗ್ರಾಮದ ನಿವಾಸಿ ಬೊಳುಬಾಯಿ ಹನುಮಂತಪ್ಪ ಎಂಬುವರಿಗೆ ಸೇರಿದ್ದ ಅಂದಾಜು 12 ಕುರಿಗಳು ಸಾವನ್ನಪ್ಪಿವೆ.
ಚಿರತೆ ದಾಳಿಗೆ ಕುರಿಗಳ ಮಾರಣ ಹೋಮ
ಚಿರತೆ ದಾಳಿ ಪರಿಣಾಮ ಕಾಕುಬಾಳು ಗ್ರಾಮದ ನಿವಾಸಿ ಬೊಳುಬಾಯಿ ಹನುಮಂತಪ್ಪ ಎಂಬುವರಿಗೆ ಸೇರಿದ್ದ ಅಂದಾಜು 12 ಕುರಿಗಳು ಸಾವನ್ನಪ್ಪಿವೆ. ಶನಿವಾರ ತಡರಾತ್ರಿ ಕುರಿಹಟ್ಟಿಯ ಮೇಲೆ ಚಿರತೆ ದಾಳಿ ನಡೆಸಿದ್ದು, ಕುರಿಗಳ ಮಾಂಸಖಂಡಗಳು ಚೆಲ್ಲಾಪಿಲ್ಲಿಯಾಗಿವೆ.
ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಸೀಲನೆ ನಡೆಸಿದ್ದಾರೆ. ಈ ಭಾಗದಲ್ಲಿ ಚಿರತೆ ಹಾವಳಿಗೆ ಬೇಸತ್ತಿರುವ ಸ್ಥಳೀಯರು, ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.