ಹೊಸಪೇಟೆ: ಕೂಡ್ಲಿಗಿ ತಾಲೂಕಿನ ಗ್ರಾಮಗಳಾದ ಟಿ. ಕಲ್ಲಹಳ್ಳಿ, ಕೆಂಚಮನಹಳ್ಳಿ, ಪಿಚಾರಹಟ್ಟಿ ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ಕಾಣಿಸಿಕೊಂಡಿದ್ದ ಚಿರತೆ ಸಾಕು ನಾಯಿಗಳನ್ನು ತಿಂದು ಹಾಕಿದೆ.
ಕೂಡ್ಲಿಗಿಯಲ್ಲಿ ಸಾಕು ನಾಯಿಗಳನ್ನು ತಿಂದು ಹಾಕಿದ ಚಿರತೆ: ಸ್ಥಳೀಯರಲ್ಲಿ ಆತಂಕ - Leopard
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಚಿರತೆ ಉಪಟಳ ಹೆಚ್ಚಾಗಿದೆ. ರೈತರ ಜಮೀನಿನಲ್ಲಿ ಓಡಾಡಿದ್ದ ಚಿರತೆ ಈಗ ಸಾಕು ನಾಯಿಗಳನ್ನು ತಿಂದು ಆತಂಕ ಸೃಷ್ಟಿಸಿದೆ.

ಕೂಡ್ಲಿಗಿಯಲ್ಲಿ ಸಾಕು ನಾಯಿಗಳನ್ನು ತಿಂದು ಹಾಕಿದ ಚಿರತೆ
ಕೂಡ್ಲಿಗಿಯಲ್ಲಿ ಸಾಕು ನಾಯಿಗಳನ್ನು ತಿಂದು ಹಾಕಿದ ಚಿರತೆ
ಈ ಹಿನ್ನೆಲೆ ಗುಡೇಕೋಟೆ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯ ಹೆಜ್ಜೆ ಗುರುತು ಪತ್ತೆ ಹಚ್ಚಿ ಪಿಚಾರಹಟ್ಟಿ ಗೊಲ್ಲರಹಟ್ಟಿ ಬಳಿ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕಲ್ಲಹಳ್ಳಿ ಗ್ರಾಮದ ರಾಜಣ್ಣ ಎಂಬುವವರ ಜಮೀನಿನಲ್ಲಿ ಸಹ ಚಿರತೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.