ಹೊಸಪೇಟೆ: ಲೋಕೋಪಯೋಗಿ ಇಲಾಖೆಯ 2019-20ನೇ ಸಾಲಿನ ಡಿ.ಎಂ.ಎಫ್. ಯೋಜನೆಯಡಿಯಲ್ಲಿ ಮಂಜೂರಾದ 3.15 ಕೋಟಿ ರೂ. ವೆಚ್ಚದ ಕಾಮಗಾರಿಯ ಭೂಮಿ ಪೂಜೆಯನ್ನು ಇಂದು ನಗರದ ಬಸ್ ಡಿಪೋ ಬಳಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಾಗವೇಣಿ ಬಸವರಾಜ ನೆರವೇರಿಸಿದರು.
ಹೊಸಪೇಟೆ; 3.15 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ - Hosapete developmental program
ಹೊಸಪೇಟೆಯ ಎರಡು ಭಾಗಗಳಲ್ಲಿ ಲೋಕೋಪಯೋಗಿ ಇಲಾಖೆ 2019-20 ನೇ ಸಾಲಿನ ಡಿ.ಎಂ.ಎಫ್.ಯೋಜನೆಯಡಿಯಲ್ಲಿ ಮಂಜೂರಾದ 3.15 ಕೋಟಿ ರೂ. ವೆಚ್ಚದ ಕಾಮಗಾರಿಯ ಭೂಮಿ ಪೂಜೆಯನ್ನು ಇಂದು ತಾಲೂಕು ಪಂಚಾಯತ್ ಅಧ್ಯಕ್ಷೆ ನಾಗವೇಣಿ ಬಸವರಾಜ ನೆರವೇರಿಸಿದರು.
![ಹೊಸಪೇಟೆ; 3.15 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ Land worship](https://etvbharatimages.akamaized.net/etvbharat/prod-images/768-512-03:54:01:1598437441-kn-06-hospete-land-worship-of-works-vsl-ka10031-26082020150542-2608f-1598434542-683.jpg)
1.75 ಕೋಟಿ ರೂ. ವೆಚ್ಚದಲ್ಲಿ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋದಿಂದ ಶಾದಿಮಹಲ್ ಮುಖಾಂತರ ಎಂ.ಪಿ. ಪ್ರಕಾಶ ನಗರದ ಸೇತುವೆ ರಸ್ತೆಯವರೆಗೂ ಸಿಸಿ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ನಗರದ ಜಂಬುನಾಥ ಸರ್ಕಲ್ ನಿಂದ ಬಸ್ ಡಿಪೋ ಮುಖಾಂತರ ಹಂಪಿ ರಸ್ತೆಗೆ (ಜಂಬುನಾಥ ಪೀಡರ್ ರಸ್ತೆ) ಅಭಿವೃದ್ಧಿ ಕಾಮಗಾರಿಯನ್ನು 1.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಹಾಗಾಗಿ ಒಟ್ಟು 3.15 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಇಂದು ನೆರವೇರಿಸಲಾಯಿತು.
ಈ ವೇಳೆ ಹುಡಾ ಅಧ್ಯಕ್ಷ ಅಶೋಕ ಜೀರೆ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಅಮಾಜಿ ಹೇಮಣ್ಣ, ಮುಖಂಡರಾದ ಧರ್ಮೇಂದ್ರ ಸಿಂಗ್, ಸಂದೀಪ ಸಿಂಗ್ ಇನ್ನಿತರರು ಉಪಸ್ಥಿತರಿದ್ದರು.