ಬಳ್ಳಾರಿ:ಲಾಕ್ಡೌನ್ ಹಿನ್ನೆಲೆ ಬಾಣಂತಿಯರಿಗೆ ಆಹಾರ ಪದಾರ್ಥಗಳ ವಿತರಣೆ ಮಾಡಲಾಯಿತು. ಆದರೆ, ವಿತರಣೆ ವೇಳೆ ಮಹಿಳೆಯರು ಅಧಿಕಾರಿಗಳು ಲಾಕ್ಡೌನ್ ಉದ್ದೇಶವನ್ನೇ ಮರೆತು ಗುಂಪು ಗುಂಪಾಗಿ ಸೇರಿದ್ದು ಕಂಡು ಬಂತು.
ಬಳ್ಳಾರಿ: ಸಾಮಾಜಿಕ ಅಂತರ ಮರೆತು ಆಹಾರ ಪದಾರ್ಥಕ್ಕೆ ಮುಗಿಬಿದ್ದ ಬಾಣಂತಿಯರು - Siruguppa of Bellary district
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಾಗಲಾಪುರ ಗ್ರಾಮದಲ್ಲಿ ಲಾಕ್ಡೌನ್ ಆದೇಶಕ್ಕೆ ಕ್ಯಾರೆ ಎನ್ನದ ಬಾಣಂತಿಯರು ಆಹಾರ ಪದಾರ್ಥ ಪಡೆಯಲು ಮುಗಿಬಿದ್ದ ದೃಶ್ಯ ಕಂಡುಬಂತು.
![ಬಳ್ಳಾರಿ: ಸಾಮಾಜಿಕ ಅಂತರ ಮರೆತು ಆಹಾರ ಪದಾರ್ಥಕ್ಕೆ ಮುಗಿಬಿದ್ದ ಬಾಣಂತಿಯರು Ladies grouped up to receive food grains by breaking social distance](https://etvbharatimages.akamaized.net/etvbharat/prod-images/768-512-6943015-885-6943015-1587865048460.jpg)
ಸಾಮಾಜಿಕ ಅಂತರವನ್ನೂ ಮರೆತು ಆಹಾರ ಪದಾರ್ಥಕ್ಕೆ ಮುಗಿಬಿದ್ದ ಬಾಣಂತಿಯರು
ಕೊರೊನಾ ನಿಯಂತ್ರಿಸಲು ಜಾರಿ ಮಾಡಿರುವ ಲಾಕ್ ಡೌನ್ ಆದೇಶ ಕೇವಲ ಹೆಸರಿಗೆ ಪಾಲನೆಯಾದಂತೆ ಕಾಣುತ್ತಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಾಗಲಾಪುರ ಗ್ರಾಮದಲ್ಲಿ ಲಾಕ್ಡೌನ್ ಆದೇಶಕ್ಕೆ ಕ್ಯಾರೆ ಎನ್ನದ ಜನರು ವಿತರಿಸಲಾಗುತ್ತಿದ್ದ ಆಹಾರ ಪದಾರ್ಥ ಪಡೆಯಲು ಮುಗಿಬಿದ್ದ ದೃಶ್ಯ ಕಂಡುಬಂತು.
ಇನ್ನೂ ಈ ವೇಳೆ ಮಹಿಳೆಯರು ಕನಿಷ್ಠ ಪಕ್ಷ ಮಾಸ್ಕ್ ಕೂಡ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿರ್ಲಕ್ಷ್ಯವಹಿಸಿದ್ದರು. ಅಧಿಕಾರಿಗಳು ಕೂಡ ಈ ನಿಟ್ಟಿನಲ್ಲಿ ನಿಗಾ ವಹಿಸದಿರುವುದು ವಿಪರ್ಯಾಸವಾಗಿದೆ.