ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಮರ್ತಾಜನ ಹಳ್ಳಿ ಮನೆಯೊಂದರ ಹಿತ್ತಲಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಬೆಳೆಯನ್ನು ಕೂಡ್ಲಿಗಿ ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹಿತ್ತಲಲ್ಲಿ ಬೆಳೆದಿದ್ದ 16 ಕೆ.ಜಿ ಗಾಂಜಾ ವಶಪಡಿಸಿಕೊಂಡ ಕೂಡ್ಲಿಗಿ ಪೊಲೀಸರು - ಗಾಂಜಾ ಬೆಳೆ
ಕೂಡ್ಲಿಗಿ ಪೊಲೀಸರು ದಾಳಿ ನಡೆಸಿ ಮನೆಯ ಹಿತ್ತಲಲ್ಲಿ ಬೆಳೆದಿದ್ದ 16 ಕೆ.ಜಿ ಗಾಂಜಾ ವನ್ನು ವಶಪಡಿಸಿಕೊಂಡಿದ್ದಾರೆ.
![ಹಿತ್ತಲಲ್ಲಿ ಬೆಳೆದಿದ್ದ 16 ಕೆ.ಜಿ ಗಾಂಜಾ ವಶಪಡಿಸಿಕೊಂಡ ಕೂಡ್ಲಿಗಿ ಪೊಲೀಸರು Marijuana](https://etvbharatimages.akamaized.net/etvbharat/prod-images/768-512-02:24:38:1599728078-kn-bly-3-illegal-ganja-trapped-7203310-10092020140526-1009f-1599726926-375.jpg)
Marijuana
ಮರ್ತಾಜನ ಹಳ್ಳಿಯ ನಿವಾಸಿ ಪಾಪಯ್ಯ ಎಂಬುವರ ಮನೆ ಹಿತ್ತಲಲ್ಲಿ ಅಕ್ರಮವಾಗಿ ಸರಿ ಸುಮಾರು 16 ಕೆ.ಜಿ ಯಷ್ಟು ಗಾಂಜಾವನ್ನು ಬೆಳೆದಿದ್ದರು. ಈ ಕುರಿತು ಮಾಹಿತಿ ಪಡೆದ ಪೊಲೀಸರು ಡಿ ಎಸ್ ಪಿ ಹರೀಶ್ ನೇತ್ರತ್ವದಲ್ಲಿ ದಾಳಿ ನಡೆಸಿ, ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಮನೆಯ ಮಾಲೀಕ ಪಾಪಯ್ಯ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.