ಕರ್ನಾಟಕ

karnataka

ETV Bharat / state

ಗಣಿನಾಡಿನಲ್ಲಿ ಕೃಷ್ಣ ಜನ್ಮಾಷ್ಠಮಿ ಸಂಭ್ರಮಾಚರಣೆ - ರೇಡಿಯೋ ಪಾರ್ಕ್​ನಲ್ಲಿ ಕೃಷ್ಣಜನ್ಮಾಷ್ಠಮಿ

ಗಣಿನಾಡು ಬಳ್ಳಾರಿಯ ಗ್ರಾಮಾಂತರ ಪ್ರದೇಶದಲ್ಲಿನ ರೇಡಿಯೋ ಪಾರ್ಕ್​ನಲ್ಲಿ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಬೆಳಿಗ್ಗೆಯಿಂದ ಸಂಜೆವರೆಗೆ ಕಂಬಕ್ಕೆ ಕಟ್ಟಿದ ಮೊಸರಿನ ಮಡಿಕೆಯನ್ನು ಒಡೆಯುವ ಪ್ರಕ್ರಿಯೆ ಮೂಲಕ ಗೊಲ್ಲ ಸಮುದಾಯದವರು ಸಂಭ್ರಮಾಚರಣೆ ಮಾಡಿದ್ದಾರೆ.

ಕೃಷ್ಣಜನ್ಮಾಷ್ಠಮಿ

By

Published : Aug 25, 2019, 6:16 PM IST

ಬಳ್ಳಾರಿ:ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಗಣಿನಾಡು ಬಳ್ಳಾರಿಯ ಗ್ರಾಮಾಂತರ ಪ್ರದೇಶದಲ್ಲಿನ ರೇಡಿಯೋ ಪಾರ್ಕ್​ನಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಕಂಬಕ್ಕೆ ಕಟ್ಟಿದ ಮೊಸರಿನ ಮಡಿಕೆಯನ್ನು ಒಡೆಯುವ ಮೂಲಕ ಗೊಲ್ಲ ಸಮುದಾಯದವರು ಕೃಷ್ಣ ಜನ್ಮಾಷ್ಠಮಿ ಸಂಭ್ರಮಾಚರಣೆ ಮಾಡಿದ್ದಾರೆ.

ಗಣಿನಾಡಿನಲ್ಲಿ ಕೃಷ್ಣ ಜನ್ಮಾಷ್ಠಮಿ ಸಂಭ್ರಮಾಚರಣೆ

ರೇಡಿಯೋ ಪಾರ್ಕ್​ನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂದೆ, ಡಯಟ್ ಕಾಲೇಜ್ ಮುಂದೆ ಹಾಗೂ ಗಣೇಶ ದೇವಸ್ಥಾನದ ಮುಂದೆ ಕಂಬಕ್ಕೆ ಕಟ್ಟಿದ್ದ ಮಡಿಕೆಯನ್ನು ಒಬ್ಬರಾದ ನಂತರ ಒಬ್ಬರು ಮಡಿಕೆ ಒಡೆಯುವ ಪ್ರಯತ್ನವನ್ನು ಮಾಡಿದರು. ಇನ್ನು ಕೆಲವರು ಮಡಿಕೆ ಒಡೆಯುವ ವ್ಯಕ್ತಿಗೆ ನೀರು ಎರಚುವ ಮೂಲಕ ಬಳ್ಳಾರಿಯಲ್ಲಿ ಕೃಷ್ಣ ಜನ್ಮಾಷ್ಠಮಿ ಆಚರಣೆ ಮಾಡಿದ್ದಾರೆ.

ಕೆಲ ಮಹಿಳೆಯರು ಮನೆಯಿಂದ ವಿವಿಧ ತಿಂಡಿ ತಿನಿಸುಗಳನ್ನು ಮಾಡಿಕೊಂಡು ಬಂದು ಸಾರ್ವಜನಿಕರಿಗೆ ವಿತರಿಸಿದ್ದಾರೆ. ಜೊತೆಗೆ ಕೆಲ ಚಿಣ್ಣರು ಕೃಷ್ಣನ ವೇಷ ಧರಿಸಿ ಸಂಭ್ರಮಾಚರಣೆ ಮಾಡಿದರು. ಇನ್ನು ಈ ಕೃಷ್ಣ ಜನ್ಮಾಷ್ಠಮಿ ಆಚರಣೆ ವೇಳೆ ಗೊಲ್ಲ ಸಮುದಾಯದ ಯುವಕರು, ಯುವತಿಯರು, ಹಿರಿಯರು ಮತ್ತು ಮಕ್ಕಳು ಭಾಗವಹಿಸಿದ್ದರು. ‌

ABOUT THE AUTHOR

...view details