ಬಳ್ಳಾರಿ: ಜಿಲ್ಲೆಯ ಕೊಟ್ಟೂರು ತಾಲೂಕಿನ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ಕಾರ್ತೀಕೋತ್ಸವ ಸೋಮವಾರ ಸಂಜೆ ನೆರವೇರಿತು. ಶಂಕರಮೂರ್ತಿ ಸ್ವಾಮೀಜಿ ಹಾಗೂ ಶಿವಪ್ರಕಾಶ ಸ್ವಾಮೀಜಿ ಹಿರೇಮಠದ ಮುಂದೆ ದೀಪ ಬೆಳಗಿಸುವುದರೊಂದಿಗೆ ಕಾರ್ತೀಕೋತ್ಸವಕ್ಕೆ ಚಾಲನೆ ನೀಡಿದರು.
ಕೊಟ್ಟೂರೇಶ್ವರ ಸ್ವಾಮಿಯ ಈ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಭಕ್ತರು ದೇವಸ್ಥಾನದ ಮಠದ ಮುಂಭಾಗದಲ್ಲಿ ಕೊಬ್ಬರಿಯನ್ನು ಉರಿಸಿ, ಭಕ್ತಿ ಸಮರ್ಪಿಸಿದರು. ಹಿರೇಮಠ, ಗಚ್ಚಿನಮಠ, ತೊಟ್ಟಿಲು ಮಠಗಳಲ್ಲಿಯೂ ದೀಪಗಳು ಬೆಳಗಿದವು.