ಬಳ್ಳಾರಿ:ಕೊರೋನಾ ಕುರಿತು ಕೋಡಿಹಳ್ಳಿ ಶ್ರೀಗಳು ಮತ್ತೊಂದು ಭವಿಷ್ಯ ನುಡಿದಿದ್ದಾರೆ. 'ಇನ್ನು ಒಂದೂವರೆ ವರ್ಷದಲ್ಲಿ ಈ ಮಾರಿ ಹೋಗುತ್ತೆ. ಆದರೆ, ಹೋಗುವಾಗ ವಿಶೇಷ ಕಷ್ಟ ಕೊಟ್ಟು ಹೋಗುತ್ತೆ. ಕೋವಿಡ್ ಗಾಳಿಯ ಮೂಲಕವೂ ಬರಬಹುದು. ಉಸಿರಾಟದ ತೊಂದರೆಯಾಗಿ ಪ್ರಾಣ ಹಾನಿಯಾಗಹುದು. ಈ ಬಗ್ಗೆ ಮುಂಜಾಗ್ರತೆ ವಹಿಸಿಬೇಕು' ಎಂದು ಸಲಹೆ ನೀಡಿದ್ದಾರೆ.
ಮಳೆ ಬಗ್ಗೆ ಭವಿಷ್ಯ ನುಡಿದ ಶ್ರೀಗಳು, ಈ ಹಿಂದೆ ಕೆಂಡಾಮಂಡಲ ಆಗುತ್ತೆ ಎಂದಿದ್ದೆ. ಮಲೆನಾಡು ಬಯಲಾಗುತ್ತೆ, ಬಯಲು ಮಲೆನಾಡಾಗುತ್ತೆ ಎಂದಿದ್ದೆ. ಈಗ ಎಲ್ಲ ಕಡೆ ನೀರು ಕೆಂಡಾಮಂಡಲ ಆಗ್ತಾ ಇದೆ. ಮುಂಗಾರುಮಳೆ ಇನ್ನೂ ಜಾಸ್ತಿಯಾಗುವ ಲಕ್ಷಣ ಕಾಣ್ತಾ ಇದೆ. ಈ ಬಾರಿ ದೊಡ್ಡ ನಗರಗಳಿಗೆ ತೊಂದರೆ ಹೆಚ್ಚಾಗಲಿದೆ ಎಂದಿದ್ದಾರೆ.