ಬಳ್ಳಾರಿ:ಹಂಪಿ ಉತ್ಸವ 2020 ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ವಿರೂಪಾಕ್ಷೇಶ್ವರ ದೇಗುಲ ಮುಂಭಾಗಕ್ಕೆ ನಟ ಯಶ್ ಆಗಮಿಸುತ್ತಿದ್ದಂತೆ ಅಪಾರ ಜನಸ್ತೋಮ ಕೇಕೆ, ಶಿಳ್ಳೆಗಳ ಮೂಲಕ ಸ್ವಾಗತಿಸಿತು.
ಜೀವನದಲ್ಲಿ ಭಯ ಇರ್ಬೇಕು, ಭಯ ಗುಂಡಿಗೆಯಲ್ಲಿರ್ಬೇಕು.. ಹಂಪಿ ಉತ್ಸವದಲ್ಲಿ ಯಶ್ ಕೆಜಿಎಫ್ ಡೈಲಾಗ್.. - ಹಂಪಿ ಉತ್ಸವ
ಹಂಪಿ ಉತ್ಸವ 2020 ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ವಿಶೇಷ ಅತಿಥಿಯಾಗಿ ಆಗಮಿಸಿದರು. ವಿರೂಪಾಕ್ಷೇಶ್ವರ ದೇಗುಲ ಮುಂಭಾಗಕ್ಕೆ ನಟ ಯಶ್ ಆಗಮಿಸುತ್ತಿದ್ದಂತೆ ಅಪಾರ ಜನಸ್ತೋಮ ಕೇಕೆ, ಸಿಳ್ಳೆಗಳ ಮೂಲಕ ಸ್ವಾಗತಿಸಲಾಯಿತು.

ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿಯ ಶ್ರೀ ಕೃಷ್ಣದೇವರಾಯ ವೇದಿಕೆ ಮೇಲೆ ನಟ ಯಶ್ ಹಂಪಿಯ ಸಂಸ್ಕೃತಿ, ನಾಡು-ನುಡಿ ಬಗ್ಗೆ ಮಾತನಾಡಿದರು. ಹಂಪಿಯ ಮಣ್ಣಿನಲ್ಲಿ ಶಕ್ತಿ ಇದೆ. ಹಂಪಿ ಪುಣ್ಯಭೂಮಿ. ಇಲ್ಲಿನ ಸ್ಮಾರಕಗಳು ನೂರಾರು ವರ್ಷಗಳ ಇತಿಹಾಸ ಹೇಳುತ್ತವೆ. ಈಗಿನ ಜನಪ್ರತಿನಿಧಿಗಳು ಇಲ್ಲಿನ ಇತಿಹಾಸವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ. ಕಲೆ, ಸಂಸ್ಕೃತಿ, ಪರಂಪರೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು. ಇತಿಹಾಸ ತಿಳಿಸುವಂತ ಕಿರುಚಿತ್ರಗಳು ಸೇರಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದರು.
ಇದೇ ವೇಳೆ ಕೆಜಿಎಫ್ ಚಿತ್ರದ ಡೈಲಾಗ್‌ಗಳನ್ನ ಹೇಳಿ ಅಭಿಮಾನಿಗಳನ್ನ ಯಶ್ ರಂಜಿಸಿದರು.