ಬಳ್ಳಾರಿ:ಜಿಲ್ಲೆಯ ಸಿರುಗುಪ್ಪ ರಸ್ತೆಯ ಅವಂಬಾವಿ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮನೆಗೆ ಗುರುವಾರ ಶ್ರೀಶೈಲ ಹಾಗೂ ಕಾಶಿ ಪೀಠದ ಜಗದ್ಗುರುಗಳು ಭೇಟಿ ನೀಡಿದ್ದರು. ಉಭಯ ಜಗದ್ಗುರುಗಳು ಗಾಲಿ ಜನಾರ್ದನ ರೆಡ್ಡಿ ಮನೆಗೆ ಆಗಮಿಸುತ್ತಿದ್ದಂತೆಯೇ ಪತ್ನಿ ಲಕ್ಷ್ಮೀ ಅರುಣಾ, ಪುತ್ರ ಕಿರೀಟಿ ಶ್ರೀಗಳ ಪಾದಪೂಜೆ ನೆರವೇರಿಸಿದರು.
ಮಾಜಿ ಸಚಿವ ಜನಾರ್ದನ ರೆಡ್ಡಿ ರೆಡ್ಡಿ ನಿವಾಸದಲ್ಲಿ ಜಗದ್ಗುರುಗಳು ಶೀಘ್ರ ರೆಡ್ಡಿಯವರ ಗತವೈಭವ ಮರುಕಳಿಸಲಿದೆ:
ಕಾಶಿ ಪೀಠದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಯವರು ಲಿಂಗ ಧಾರಣೆ ಮಾಡಿಕೊಂಡಿದ್ದರು. ಅವರು ಹೇಮರೆಡ್ಡಿ ಮಲ್ಲಮ್ಮನವರ ಅನುಯಾಯಿಗಳಾಗಿದ್ದಾರೆ. ಈ ದಿನ ಬೆಳಿಗ್ಗೆ ಲಿಂಗಪೂಜೆ, ಪಾದಪೂಜೆ ಆಗಿದೆ. ಈ ಮನೆಯಲ್ಲಿ ಸಂಸ್ಕೃತಿಯ ವಾತಾವರಣ ಸೃಷ್ಟಿಯಾಗಿದೆ. ರೆಡ್ಡಿಯವರು ದಶಕದಿಂದಲೂ ಅನೇಕ ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ಆ ಸಮಸ್ಯೆಯಿಂದ ಮುಕ್ತಿ ಹೊಂದಲಿದ್ದಾರೆ. ಶೀಘ್ರವೇ ಅವರ ಗತವೈಭವ ಮರುಕಳಿಸಲಿದೆ ಎಂದು ಕಾಶಿ ಪೀಠದ ಜಗದ್ಗುರು ಹಾರೈಸಿದ್ದಾರೆ.
ಸಾಮೂಹಿಕ ವಿವಾಹ ಮಹೋತ್ಸವದ ನಿಮಿತ್ತ ತಾವು ಬಳ್ಳಾರಿಗೆ ಬಂದ್ವಿ. ಈ ಹಿನ್ನೆಲೆಯಲ್ಲಿ ರೆಡ್ಡಿ ನಿವಾಸಕ್ಕೆ ಬಂದು ಪಾದಪೂಜೆ ಸ್ವೀಕರಿಸಿದೆವು. ರೆಡ್ಡಿಯವರು ಕಾಶಿ ಪೀಠದಲ್ಲಿ ಲಿಂಗ ಧಾರಣೆ ಮಾಡಿಕೊಂಡಿದ್ದರು. ಅಂದಿನಿಂದ ನಿಷ್ಠೆ, ಭಕ್ತಿಯಿಂದ ಲಿಂಗ ಪೂಜೆ ಮಾಡ್ತಿದ್ದಾರೆ. ರೆಡ್ಡಿಯವರ ಕುಟುಂಬಕ್ಕೆ ಸನ್ಮಂಗಲವಾಗಲಿ ಎಂದು ಆಶೀರ್ವದಿಸಿದರು.