ಬಳ್ಳಾರಿ: ಹಿಂದಿನ ಬಾಗಿಲಿನಿಂದ ಅಧಿಕಾರದ ಗದ್ದುಗೆ ಏರಲು ನಾನು ತಯಾರಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ಪ್ರೊ. ಮಹೇಶ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ಹಿಂಬಾಗಿಲಿನಿಂದ ಅಧಿಕಾರದ ಗದ್ದುಗೆ ಏರಲು ನಾನು ತಯಾರಿಲ್ಲ: ಮಹೇಶ್ ಜೋಶಿ
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿಯಾಗಿರುವ ಪ್ರೊ. ಮಹೇಶ್ ಜೋಶಿ ಬಳ್ಳಾರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದು, ಹಿಂಬಾಗಿಲಿನಿಂದ ಅಧಿಕಾರದ ಗದ್ದುಗೆ ಏರಲು ನಾನು ತಯಾರಿಲ್ಲ ಎಂದಿದ್ದಾರೆ.
ಬಳ್ಳಾರಿ ನಗರದ ಪತ್ರಿಕಾ ಭವನದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ರಾಜ್ಯಾಧ್ಯಕ್ಷರ ಅವಧಿಯಲ್ಲಾದ ಲೋಷ - ದೋಷಗಳು, ಅವರ ಕಾರ್ಯವೈಖರಿಗೂ ನನಗೂ ಹೋಲಿಕೆ ಮಾಡಿಕೊಳ್ಳೋದು ಬೇಡ. ಹೇಗಾದರೂ ಮಾಡಿ ಅಧಿಕಾರದ ಗದ್ದುಗೆ ಏರುವ ಹಂಬಲ ನನಗಂತೂ ಇಲ್ಲ. ನಾನು ಕಟ್ಟಾ ಕನ್ನಡ ಸಾಹಿತ್ಯದ ರಾಯಭಾರಿಯಾಗಿರುವೆ ಎಂದರು.
ಕರ್ನಾಟಕ ರಾಜ್ಯದ ಗಡಿಭಾಗದ ಕನ್ನಡ ಶಾಲೆಗಳನ್ನ ಮರು ಆರಂಭಿಸುವ ಕಾರ್ಯಕ್ಕೆ ನಾನು ಕೈಹಾಕುತ್ತೇನೆ. ಮುಚ್ಚುವಂತಹ ಸ್ಥಿತಿಯಲ್ಲಿರುವ ಕನ್ನಡ ಶಾಲೆಗಳನ್ನ ಯಥಾಸ್ಥಿತಿಗೆ ಮುಂದುವರಿಸುವಂತೆ ಮಾಡುತ್ತೇನೆ. ಕಸಾಪ ಸದಸ್ಯತ್ವ ನೋಂದಣಿ ಶುಲ್ಕವನ್ನ ಸದ್ಯ ಸಾವಿರ ರೂ.ಗಳವರೆಗೆ ದಾಟಿದೆ. ಅದನ್ನ 250 ರೂ.ಗಳಿಗೆ ಇಳಿಕೆ ಮಾಡೋ ಕಾರ್ಯಕ್ಕೆ ಮುಂದಾಗುವೆ. ಸಿಆರ್ಪಿಎಫ್ ಹಾಗೂ ವಿಕಲಚೇತನರಿಗೆ ಉಚಿತವಾಗಿ ಸದಸ್ಯತ್ವ ನೀಡಲು ಶ್ರಮಿಸುವೆ ಎಂದರು..