ಬಳ್ಳಾರಿ: ದಸರಾ ಮಹೋತ್ಸವದ ನಿಮಿತ್ತ ಜಿಲ್ಲೆಯ ಹರಪನಹಳ್ಳಿ ಪಟ್ಟಣ ಹೊರವಲಯದ ದೊಡ್ಡ ಮೈಲಾರಲಿಂಗೇಶ್ವರ ದೇಗುಲದಲ್ಲಿ ಕೆಲದಿನಗಳ ಹಿಂದೆ ಕಾರಣಿಕೋತ್ಸವವು ಅದ್ಧೂರಿಯಾಗಿ ನಡೆದಿದೆ.
ಅದ್ದೂರಿಯಾಗಿ ನಡೆದ ಮೈಲಾರಲಿಂಗನ ಕಾರಣಿಕೋತ್ಸವ - karnikotsava celebration in ballari
ಹರಪನಹಳ್ಳಿಯ ದೊಡ್ಡ ಮೈಲಾರಲಿಂಗೇಶ್ವರ ದೇಗುಲದಲ್ಲಿ ಇತ್ತೀಚೆಗೆ ಅದ್ದೂರಿಯಾಗಿ ಕಾರಣಿಕೋತ್ಸವವನ್ನು ಆಚರಿಸಲಾಗಿದೆ.
![ಅದ್ದೂರಿಯಾಗಿ ನಡೆದ ಮೈಲಾರಲಿಂಗನ ಕಾರಣಿಕೋತ್ಸವ](https://etvbharatimages.akamaized.net/etvbharat/prod-images/768-512-4716400-thumbnail-3x2-chai.jpg)
ಕಾರಣಿಕೋತ್ಸವ
ಅದ್ದೂರಿಯಾಗಿ ನಡೆದ ಮೈಲಾರಲಿಂಗನ ಕಾರಣಿಕೋತ್ಸವ
ಬಾನೆತ್ತರಕ್ಕೆ ಮುಖಮಾಡಿರುವ ಬಿಲ್ಲನ್ನೇರಿದ ಗೋರವಯ್ಯ ಮುತ್ತಿನ ಸದರು ತೂಗುಯ್ಯಾಲೆಯಲ್ಲಿ ತೂಗುತ್ತಲೇ ಪರಾಕ್ ಎಂಬ ಕಾರಣಿಕ ನುಡಿಯನ್ನು ಗೋರವಯ್ಯ ನುಡಿದಿದ್ದಾರೆ.
ಪ್ರತಿವರ್ಷ ಎರಡು ಬಾರಿ ಈ ಕಾರ್ಣಿಕೋತ್ಸವವು ನಡೆಯುತ್ತದೆ. ರಾತ್ರಿ ವೇಳೆ ನಡೆಯುವ ಕಾರಣಿಕೋತ್ಸವದಲ್ಲಿ ದೇಗುಲದ ಧರ್ಮದರ್ಶಿಗಳು, ಗೋರವಯ್ಯ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.