ಬಳ್ಳಾರಿ:ಕುಡಿಯುವ ನೀರಿಗೆ ವಿಷ ಹಾಕುವವರ ಮೇಲೆ ಮರ್ಡರ್ ಕೇಸ್ ಹಾಕಬೇಕು. ಮಾಲಿನ್ಯ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಬಂದ್ರೆ ಹಣಕ್ಕಾಗಿ ಬರುತ್ತಾರೆ ಎಂಬ ಜನರ ಭಾವನೆ ತೆಗೆದುಹಾಕಬೇಕು. ಕೇಸ್ ಹಾಕಲು ಬೇಕಾದ ವಿಶೇಷವಾದ ಕಾನೂನು ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚಿಸಲು ಸಿದ್ಧ ಎಂದು ಪ್ರವಾಸೋದ್ಯಮ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದ್ದಾರೆ.
ಬೆಂಗಳೂರಿನ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೇಂದ್ರ ಕಚೇರಿಯಲ್ಲಿಂದು ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಿಸರ ಮಾಲಿನ್ಯ ಮಾಡುವವರ ವಿರುದ್ಧ ಮಾಲಿನ್ಯ ಮಂಡಳಿಗೆ ವಿಶೇಷ ಅಸ್ತ್ರ ಇಲ್ಲ. ಹೀಗಾದಾಗ ಪೋಲಿಸ್ ಠಾಣೆಗಳಲ್ಲಿ ಎಫ್ಐಆರ್ ಆಗುವುದಿಲ್ಲ. ಅದೇ ರೀತಿ ಮಾಲಿನ್ಯ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದರು.