ಕರ್ನಾಟಕ

karnataka

ETV Bharat / state

ಸರ್ಕಾರಿ ನೌಕರರ ಸಂಘದ ಚುನಾವಣಾ ಫಲಿತಾಂಶ ಪ್ರಕಟ - undefined

ನೌಕರರ ಸಂಘದ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯ ಸ್ಥಾನ ಚುನಾವಣೆಯಲ್ಲಿ ಅಧ್ಯಕ್ಷ ರಾಗಿ ಶಿವಾಜಿರಾವ್, ಖಜಾಂಚಿಯಾಗಿ ಎಸ್.ಎಂ ಭದ್ರಯ್ಯ ಆಯ್ಕೆಯಾಗಿದ್ದಾರೆ.

ಚುನಾವಣೆ

By

Published : Jul 12, 2019, 2:38 AM IST

ಬಳ್ಳಾರಿ :ಗಣಿನಾಡಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಶಿವಾಜಿರಾವ್, ಖಜಾಂಚಿಯಾಗಿ ಎಸ್.ಎಂ ಭದ್ರಯ್ಯ, ರಾಜ್ಯ ಪರಿಷತ್​​​ನ ಸದಸ್ಯರಾಗಿ ಸಿ. ಗುರುರಾಜ ಆಯ್ಕೆಯಾಗಿದ್ದಾರೆ.

ನೌಕರ ಸಂಘದ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರ ನೌಕರರ ಸಂಘದ ಚುನಾವಣೆ

ನಗರದ ನೌಕರ ಸಂಘದ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರ ನೌಕರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಗುರುವಾರ ಬೆಳಿಗ್ಗೆ ಚುನಾವಣಾ ನಡೆದಿದ್ದು, ಸಂಜೆ ಫಲಿತಾಂಶ ಹೊರಬಂದಿದೆ.

ಚುನಾವಣಾ ನೀತಿ ಉಲ್ಲಂಘನೆ ಮಾಡಿದ ನೌಕರರು :

ಆರಂಭದಲ್ಲಿ ಚುನಾವಣಾ ನಡೆಯುವ ಸ್ಥಳದಲ್ಲಿಯೇ ಕೆಲವು ಅಭ್ಯರ್ಥಿಗಳು ಕರಪತ್ರಗಳನ್ನು ಹಂಚುತ್ತಿದ್ದರು. ಚುನಾವಣೆ ನಡೆಯುವ ಪ್ರದೇಶದ 100 ಮೀಟರ್ ಒಳಗೆ ಕಾರು, ಬೈಕ್, ನೂರಾರು ನೌಕರ ಅಭಿಮಾನಿಗಳು ಸುತ್ತಾಟ ಮಾಡುತ್ತಿದ್ದರೂ, ಪೊಲೀಸ್ ಇಲಾಖೆ ಸಿಬ್ಬಂದಿ ಕುರ್ಚಿಯಲ್ಲಿ ಕುಳಿತು ಆರಾಮಾಗಿದ್ದರು.

For All Latest Updates

TAGGED:

ABOUT THE AUTHOR

...view details