ಕರ್ನಾಟಕ

karnataka

ETV Bharat / state

ಬಿ ಡಿ ಜತ್ತಿ ನಿಲುವು ಅನುಸರಿಸಿ.. ಶಾ ಜೊತೆಗಿನ ಮಹತ್ವದ ಸಭೆಗೂ ಮುನ್ನ ಸಿಎಂ ಬೊಮ್ಮಾಯಿಗೆ ಚಂದರಗಿ ಪತ್ರ

ಕರ್ನಾಟಕ-ಮಹಾ ಗಡಿ ವಿವಾದ ಕುರಿತು ಇಂದು ಸಂಜೆ ಮಹತ್ವದ ಸಭೆ ನಡೆಯಲಿದ್ದು, ಇದಕ್ಕು ಮುನ್ನ ಸಿಎಂ ಬೊಮ್ಮಾಯಿ ಅವರಿಗೆ ಅಶೋಕ್​ ಚಂದರಗಿ ಪತ್ರ ಬರೆದಿದ್ದಾರೆ.

Karnataka Maharashtra border dispute  Ashoka Chandaragi wrote a letter  Chandaragi wrote a letter to CM Bommai  ಕರ್ನಾಟಕ ಮಹಾ ಗಡಿ ವಿವಾದ  ಮಹತ್ವದ ಸಭೆಗೂ ಮುನ್ನ ಸಿಎಂ ಬೊಮ್ಮಾಯಿಗೆ ಪತ್ರ  ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಚಂದರಗಿ  ಗಡಿ ವಿವಾದ ಕುರಿತು ಇಂದು ಸಂಜೆ ಮಹತ್ವದ ಸಭೆ  ಸಿಎಂ ಬೊಮ್ಮಾಯಿಗೆ ಅಶೋಕ್​ ಚಂದರಗಿ ಪತ್ರ  ಮಹಾರಾಷ್ಟ್ರದಿಂದ ಗಡಿ ವಿವಾದ ಜೀವಂತ ಇಡುವ ಯತ್ನ  ಬೆಳಗಾವಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ  ಮಹಾರಾಷ್ಟ್ರದ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ
ಮಹತ್ವದ ಸಭೆಗೂ ಮುನ್ನ ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಚಂದರಗಿ

By

Published : Dec 14, 2022, 10:31 AM IST

ಬೆಳಗಾವಿ:ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ವಿವಾದ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ನೇತೃತ್ವದಲ್ಲಿ ಉಭಯ ರಾಜ್ಯಗಳ ಮಹತ್ವದ ಸಭೆ ಇಂದು ಸಂಜೆ ನವದೆಹಲಿಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಭಾಗಿಯಾಗಲಿದ್ದಾರೆ. ಇದಕ್ಕೂ ಮುನ್ನ ಸಿಎಂ ಬಸವರಾಜ ಬೊಮ್ಮಾಯಿಗೆ ಗಡಿಭಾಗದ ಹೋರಾಟಗಾರ ಅಶೋಕ ಚಂದರಗಿ ಪತ್ರ ಬರೆದಿದ್ದಾರೆ.

ಬೆಳಗಾವಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷರಾಗಿರುವ ಅಶೋಕ್​ ಚಂದರಗಿ ಬರೆದಿರುವ ಪತ್ರದಲ್ಲಿ, 'ಕಳೆದ 67 ವರ್ಷಗಳಿಂದ ಮಹಾರಾಷ್ಟ್ರದಿಂದ ಗಡಿ ವಿವಾದ ಜೀವಂತ ಇಡುವ ಯತ್ನವಾಗಿದೆ. ಸದ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಭೆ ಸಹಜವಾಗಿ ಆತಂಕ ಸೃಷ್ಟಿಸಿದೆ. 1956ರ ಫಜಲ್ ಅಲಿ ಆಯೋಗ, 1967ರ ಮಹಾಜನ ಆಯೋಗ ಅಂತಿಮ ವರದಿ ಸಲ್ಲಿಸಿವೆ. ಕರ್ನಾಟಕ ಸರ್ಕಾರ ಹಲವು ಸಲ ಅಧೀವೇಶನದಲ್ಲಿ ನಿರ್ಣಯ ಅಂಗೀಕರಿಸಿದೆ. ಆದ್ರೂ 2004ರಿಂದ ಕರ್ನಾಟಕ 865 ನಗರ, ಪಟ್ಟಣಗಳು ತಮಗೆ ಸೇರಬೇಕು ಎಂದು ಮಹಾರಾಷ್ಟ್ರ ಮೊಂಡು ವಾದ ಮಾಡುತ್ತಿದೆ. ಅಷ್ಟೇ ಅಲ್ಲದೆ, 2004 ರಲ್ಲೇ ಸುಪ್ರೀಂಕೋರ್ಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರ ದಾವೆ ಹೂಡಿದೆ' ಎಂದು ಉಲ್ಲೇಖಿಸಿದ್ದಾರೆ.

ಮಹತ್ವದ ಸಭೆಗೂ ಮುನ್ನ ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಚಂದರಗಿ

ಮಹಾರಾಷ್ಟ್ರದ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಹಲವು ಸಲ ರಾಜ್ಯ ನಾಯಕರ ಮೇಲೆ ಒತ್ತಡ ಹೇರಿದೆ. ಕೇಂದ್ರ ‌ಗೃಹ ಸಚಿವರ ಸೂಚನೆ ಮೇರೆಗೆ ಮಹಾರಾಷ್ಟ್ರ ಸಿಎಂ ಆಗಿದ್ದ ವೈ ಬಿ ಚವ್ಹಾಣ್​ ಜೊತೆಗೆ ಅಂದು ಕರ್ನಾಟಕದ ಸಿಎಂ ಆಗಿದ್ದ ಬಿ ಡಿ ಜತ್ತಿ ಮಾತುಕತೆ ನಡೆಸಿದ್ದರು. ನಾವು ನಿಮಗೆ ಕೊಡುವುದು ಏನೂ ಇಲ್ಲ.. ಸೊಲ್ಲಾಪುರ, ಅಕ್ಕಲಕೋಟೆ ನಮಗೆ ಸೇರಬೇಕು ಎಂದು ಬಿ ಡಿ ಜತ್ತಿ ಆಗಿನ ಮಹಾರಾಷ್ಟ್ರ ಸರ್ಕಾರದ ಸಿಎಂ ವೈ ಬಿ ಚವ್ಹಾಣ್​ಗೆ ತಿರುಗೇಟು ನೀಡಿದ್ದರು.

ಮಹತ್ವದ ಸಭೆಗೂ ಮುನ್ನ ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಚಂದರಗಿ

ಇದಾದ ಬಳಿಕ ಮಹಾರಾಷ್ಟ್ರ ನಾಯಕರು ಇಂದಿರಾ ಗಾಂಧಿ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು. ಮಹಾಜನ್ ಆಯೋಗ ರಚನೆಗೆ ಒಪ್ಪಿಕೊಳ್ಳುವಂತೆ ಸಿಎಂ ಆಗಿದ್ದ ನಿಂಜಲಿಂಗಪ್ಪ ಮೇಲೆ ಒತ್ತಡ ಹೇರಲಾಗಿತ್ತು. ಮಹಾರಾಷ್ಟ್ರ ‌ಒತ್ತಡಕ್ಕೆ ಮಣಿದು ಇಂದಿರಾ ಗಾಂಧಿ ಮಹಾಜನ್​ ಆಯೋಗ ನೇಮಿಸಿದ್ದರು. ಫಸಲ್ ಅಲಿ, ಮಹಾಜನ್ ಆಯೋಗ ವರದಿಗಳು ಕರ್ನಾಟಕ ಪರ ಬಂದರೂ ಮಹಾರಾಷ್ಟ್ರ ‌ಮೊಂಡುವಾದ ಮುಂದುವರೆಸಿತ್ತು ಎಂದು ಪತ್ರದಲ್ಲಿ ಬರೆದಿದ್ದಾರೆ.

ವಿಧಾನಸಭೆಯಲ್ಲಿ ಅಂಗೀಕರಿಸಿದ ನಿರ್ಣಯದ ಚೌಕಟ್ಟಿನಲ್ಲಿ ಚರ್ಚೆ ನಡೆಸಬೇಕು. ಮಹಾರಾಷ್ಟ್ರದ ಯಾವುದೇ ಕುತಂತ್ರಗಳಿಗೆ ಸಿಎಂ ಬೊಮ್ಮಾಯಿ ಬಲಿ ಆಗಬಾರದು. ಅಮಿತ್ ಶಾ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ತಾವು ಬಿ ಡಿ ಜತ್ತಿಯಂತೆ ನಿರ್ಣಯ ತೆಗೆದುಕೊಳ್ಳಬೇಕು. ಕನ್ನಡಿಗರ ಹಿತಾಸಕ್ತಿ ಕಾಪಾಡುವುದರಲ್ಲಿ ಯಾವುದೇ ರಾಜೀ ಇಲ್ಲ ಎಂಬ ನಿಮ್ಮ ಹೇಳಿಕೆ ನಂಬಿದ್ದೇವೆ ಎಂದು ಸಿಎಂ ಬೊಮ್ಮಾಯಿಗೆ ಪತ್ರದ ಮೂಲಕ ಅಶೋಕ ಚಂದರಗಿ ಒತ್ತಾಯಿಸಿದ್ದಾರೆ.

ABOUT THE AUTHOR

...view details