ಕರ್ನಾಟಕ

karnataka

ETV Bharat / state

20 ವರ್ಷಗಳಿಂದ ದುಡಿಯುತ್ತಿರುವ ಗುತ್ತಿಗೆ ಕೆಲಸಗಾರರನ್ನು ಕಾಯಂಗೊಳಿಸಿ: ಕೆ.ಎಂ.ಗುರುಮೂರ್ತಿ - ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ ಗುರುಮೂರ್ತಿ

20 ವರ್ಷಗಳಿಂದ ಗುತ್ತಿಗೆ ಕೆಲಸಗಾರರಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಕಾಯಂಗೊಳಿಸಿ ಎಂದು ಬ್ಯಾಂಕ್ ನೌಕರರ ಸಂಘ ಒತ್ತಾಯಿಸಿದೆ.

Karnataka grameena Bank
ಕೆ.ಎಂ ಗುರುಮೂರ್ತಿ

By

Published : Sep 29, 2020, 1:57 PM IST

ಬಳ್ಳಾರಿ:ಕಳೆದ 20 ವರ್ಷಗಳಿಂದ ಗುತ್ತಿಗೆ ಕೆಲಸಗಾರರಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಕಾಯಂಗೊಳಿಸಿ ಎಂದು ಬೆಂಗಳೂರಿನ ಸಿಜಿಐಟಿ ಕೋರ್ಟ್ ನಿರ್ಣಯ ನೀಡಿದೆ. ಆದರೂ ಇದುವರೆಗೂ ಬ್ಯಾಂಕ್ ಕಾಯಂಗೊಳಿಸಿಲ್ಲ. ಹಾಗಾಗಿ ಇಂದಿನಿಂದ 18 ದಿನಗಳ ಕಾಲ ಸರಣಿ ಪ್ರತಿಭಟನೆ ಮಾಡುತ್ತೇವೆ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಗುರುಮೂರ್ತಿ ತಿಳಿಸಿದರು.

ಗುತ್ತಿಗೆ ಕೆಲಸಗಾರರನ್ನು ಕಾಯಂಗೊಳಿಸುವಂತೆ ಒತ್ತಾಯ

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಗುರುಮೂರ್ತಿ ಮಾತನಾಡಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘ ಮತ್ತು ಅಧಿಕಾರಿಗಳ ಸಂಘ, ಸಮನ್ವಯ ಮತ್ತು ಜಂಟಿ ಕ್ರಿಯಾ ಸಮಿತಿ ಅಡಿಯಲ್ಲಿ ಎರಡು ಸಂಘಗಳ ಪದಾಧಿಕಾರಿಗಳು ಮತ್ತು ಕೇಂದ್ರ ಸಮಿತಿ ಸದಸ್ಯರು 29 ಸೆಪ್ಟೆಂಬರ್ 2020ರಿಂದ 15 ಅಕ್ಟೋಬರ್ 2020ರವರೆಗೆ ಪ್ರಧಾನ ಕಚೇರಿ ಬಳ್ಳಾರಿ ಎದುರು ವಿವಿಧ ಬೇಡಿಕೆಗಳಿಗಾಗಿ ಪ್ರತಿನಿತ್ಯ ವಿವಿಧ ಜಿಲ್ಲೆಗಳಿಂದ ಆಗಮಿಸಿ ಸರಣಿ ಧರಣಿ ನಡೆಸುತ್ತೇವೆ. ಇಂದಿನಿಂದ 18 ದಿನಗಳ ಕಾಲ ಸರಣಿ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.

ನಂತರ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಜೋಷಿ ಮಾತನಾಡಿ, ಕರ್ನಾಟಕ ಗ್ರಾಮೀಣ ಬ್ಯಾಂಕ್​ನ ಸಿಬ್ಬಂದಿ ಮತ್ತು ಅಧಿಕಾರಗಳಿಗೆ ಇನ್ಸೂರೆನ್ಸ್​ ಹೆಚ್ಚಳ ಮಾಡಿ, ಕೊರೊನಾ ವೈರಸ್​ನಿಂದ ಬಳಲುವ ಅಧಿಕಾರಿಗಳಿಗೆ, ಸಿಬ್ಬಂದಿಗೆ ವೇತನ ಸಹಿತ ರಜೆ ನೀಡಿ ಎನ್ನುವ ಬೇಡಿಕೆಗಳನ್ನು ಇಟ್ಟುಕೊಂಡು ಧರಣಿ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಈ ಸಮಯದಲ್ಲಿ ಅಧಿಕಾರಿ ಮತ್ತು ನೌಕರರ ಸಂಘದ ಕೀರ್ತಿರಾಜ್, ಪ್ರದೀಪ್, ಸಾಗರ, ಪರಮಶುರಾಮ್, ಹಾಜರಿದ್ದರು.

ABOUT THE AUTHOR

...view details