ಹೊಸಪೇಟೆ: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯ ಜೆಸ್ಕಾಂ ಎಇಇ ಲಂಚ ಪಡೆದ ಆರೋಪದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲಂಚ ಪಡೆದ ಆರೋಪ: ಎಸಿಬಿ ಬಲೆಗೆ ಬಿದ್ದ ಜೆಸ್ಕಾಂ ಎಇಇ - ACB conducts Raids on jescom AEE in Hosapete
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಜೆಸ್ಕಾಂ ಎಇಇ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಎಸಿಬಿ ಬಲೆಗೆ ಬಿದ್ದ ಜೆಸ್ಕಾಂ ಎಇಇ
ಜೆಸ್ಕಾಂನ ಭಾಸ್ಕರ್ ಎಸಿಬಿ ಬಲೆಗೆ ಬಿದ್ದವರು. ಈ ಅಧಿಕಾರಿಯು ಬಸರಹಳ್ಳಿ ತಾಂಡದ ರೈತ ಉಮೇಶನಾಯ್ಕ್ ಜಮೀನಿಗೆ ಟಿ.ಸಿ.ಅಳವಡಿಸಲು 45 ಸಾವಿರ ರೂ. ಲಂಚ ಕೇಳಿದ್ದಾರೆ. ಮುಂಗಡವಾಗಿ ರೈತ 25 ಸಾವಿರ ಹಣ ಕೊಟ್ಟಿದ್ದಾರೆ. ರೈತನ ದೂರಿನಂತೆ ಎ.ಸಿ.ಬಿ.ಅಧಿಕಾರಿಗಳು ದಾಳಿ ಮಾಡಿ ತನಿಖೆ ನಡೆಸುತ್ತಿದ್ದಾರೆ.