ಬಳ್ಳಾರಿ:ಗಣಿ ನಾಡಲ್ಲಿ 20ನೇ ಕಾರ್ಗಿಲ್ ವಿಜಯ್ ದಿವಸ್ ಸವಿನೆನಪಿಗಾಗಿ ರಾಷ್ಟ್ರದೇವೊಭವ ಕಾರ್ಯಕ್ರಮ ನಡೆಯಿತು.
ಬಳ್ಳಾರಿಯಲ್ಲಿ ಕಾರ್ಗಿಲ್ ಸ್ಮರಣೆ ಅಂಗವಾಗಿ ರಾಷ್ಟ್ರದೇವೋಭವ ಕಾರ್ಯಕ್ರಮ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಐದನೇ ವಾರ್ಷಿಕೋತ್ಸವ ಸಂಭ್ರಮವನ್ನು ಕಲಾ ಸಂಗಮ ಸಾಂಸ್ಕೃತಿಕ ಸಂಸ್ಥೆಯಿಂದ ಆಚರಿಸಲಾಯಿತು. ಗೋನಾಳ ರಾಜಶೇಖರ್ ಗೌಡ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಕಲಾ ಸಂಗಮ ಸಾಂಸ್ಕೃತಿ ಸಂಸ್ಥೆಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ, ಚಿತ್ರಕಲಾ, ದೇಶಭಕ್ತಿ ಸಮೂಹ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಅನೇಕ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕಲೆ ಪ್ರದರ್ಶಿಸಿದರು.
ಜಿಂದಾಲ್ ಶಾಲೆ ಮಕ್ಕಳಿಂದ ಮೊದಲು ಮಾನವನಾಗು ಹಾಡಿಗೆ ನೃತ್ಯ, ಇಂದ್ರ ಕುಮಾರ್ ತಂಡದಿಂದ ಸುಗಮ ಸಂಗೀತ ಮತ್ತು ಪ್ರಕೃತಿ ಮತ್ತು ಅನುಕೃಪ ಅವರಿಂದ ದೇಶಭಕ್ತಿ ಗೀತೆಗಳ ಕಾರ್ಯಕ್ರಮ ನಡೆಯಿತು.
ಈ ವೇಳೆ ಕನ್ನಡ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ವೀರಶೈವ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಗೋನಾಳ್ ರಾಜಶೇಖರ್ ಗೌಡ, ಬಿಜೆಪಿಯ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷೆ ನಿಶ್ಚಿತ, ಕಲಾ ಸಂಗಮ ಸಂಸ್ಕೃತಿ ಸಂಸ್ಥೆಯ ಸಂಸ್ಥಾಪಕ ಎಂ.ವಿನೋದ್, ಮಾಜಿ ಸೈನಿಕರಾದ ಲಕ್ಷ್ಮಣ, ಶಿವಾಜಿರಾವ್, ಯಶವಂತ ಭೂಪಾಲ್, ಡಿ.ಕೆ ರಾಮಕೃಷ್ಣ, ಅಶೋಕ್ ಸೇರಿದಂತೆ ಇತರರು ಉಪಸ್ಥಿತರಿದ್ರು.