ಹೊಸಪೇಟೆ :ಹೊಸಪೇಟೆಯ ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಳಿವಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಟ್ವಿಟರ್ ಅಭಿಯಾನವನ್ನು ಆರಂಭಿಸಿದೆ.
ಕನ್ನಡ ವಿವಿ ಉಳುವಿಗಾಗಿ ಕರವೇ ಟ್ವಿಟರ್ ಅಭಿಯಾನ!! - Karnataka Defense Forum Twitter Campaign
ನಾವು ಒಟ್ಟಾಗಿ ನಿಂತು ಕನ್ನಡ ವಿಶ್ವವಿದ್ಯಾಲಯವನ್ನು ಉಳಿಸಬೇಕಾಗಿದೆ. ಡಿ.18 ರಂದು ಸಂಜೆ ಕರವೇ ಆಯೋಜಿಸಿರುವ ಅಭಿಯಾನದಲ್ಲಿ ಮಾತನಾಡೋಣ. ಸರ್ಕಾರವನ್ನು ಎಚ್ಚರಿಸೋಣ..
ಹೊಸಪೇಟೆಯ ಹಂಪಿ ಕನ್ನಡ ವಿಶ್ವವಿದ್ಯಾಲಯ ಉಳಿವಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಟ್ವಿಟರ್ ಅಭಿಯಾನವನ್ನು ಆರಂಭಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರವೇ ರಾಜ್ಯ ಘಟಕದ ಅಧ್ಯಕ್ಷ ಟಿ ಎ ನಾರಾಯಣಗೌಡ ಅವರು, ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ಒದಗಿಸದೆ ರಾಜ್ಯ ಸರ್ಕಾರ ನಿಧಾನವಾಗಿ ವಿಷವುಣಿಸಿ ಕೊಲ್ಲುತ್ತಿದೆ. ನಾವು ಒಟ್ಟಾಗಿ ನಿಂತು ಕನ್ನಡ ವಿಶ್ವವಿದ್ಯಾಲಯವನ್ನು ಉಳಿಸಬೇಕಾಗಿದೆ. ಡಿ.18 ರಂದು ಸಂಜೆ ಕರವೇ ಆಯೋಜಿಸಿರುವ ಅಭಿಯಾನದಲ್ಲಿ ಮಾತನಾಡೋಣ. ಸರ್ಕಾರವನ್ನು ಎಚ್ಚರಿಸೋಣ ಎಂದಿದ್ದಾರೆ.#ಕನ್ನಡ ವಿವಿ ಉಳಿಸಿ ಎಂಬ ಹ್ಯಾಷ್ ಟ್ಯಾಗ್ ಮೂಲಕ ಕರವೇ ಆಕ್ರೋಶ ಹೊರ ಹಾಕಿದೆ.
Last Updated : Dec 18, 2020, 1:08 PM IST