ಕರ್ನಾಟಕ

karnataka

ETV Bharat / state

ಕೊರೊನಾ ನಡುವೆ ಕಾರ ಹುಣ್ಣಿಮೆ ಸಂಭ್ರಮ; ಗಣಿನಾಡಲ್ಲಿ ಕಳೆಗುಂದಿದ ಜೋಡೆತ್ತುಗಳ ಮೆರವಣಿಗೆ

ಗ್ರಾಮೀಣ ಭಾಗದಲ್ಲಿನ ರೈತಾಪಿ ವರ್ಗಗಳ ಮನೆಗಳಲ್ಲಿನ ಜೋಡೆತ್ತುಗಳಿಗೆ ಬಣ್ಣ ಬಳಿದು, ವಿಶೇಷ ಅಲಂಕಾರ ಮಾಡಿ ಅವುಗಳನ್ನ ಸ್ಪರ್ಧೆಗೆ ಇಳಿಸಲಾಗುತ್ತೆ. ಊರ ಅಗಸೆ ಬಾಗಿಲಿಗೆ ಬೇವಿನ ಸೊಪ್ಪಿನ ತಳಿರನ್ನ ಉದ್ದವಾಗಿ ಕಟ್ಟಿ ಸುಮಾರು ಮೈಲಿಂದ ಜೋಡೆತ್ತುಗಳನ್ನ ಕರಿ ಬಿಡಲಾಗುತ್ತೆ.

Bellary
ಕಾರ ಹುಣ್ಣಿಮೆ

By

Published : Jun 6, 2020, 8:10 AM IST

ಬಳ್ಳಾರಿ:ಮಹಾಮಾರಿ ಕೊರೊನಾ ಸೋಂಕಿನ ನಡುವೆ ಗಣಿನಾಡಿನಲ್ಲಿ ಕಾರ ಹುಣ್ಣಿಮೆ ಕಳೆಗುಂದಿದ್ದು, ಕೆಲ ಗ್ರಾಮಗಳಲ್ಲಿ ಸಾಂಕೇತಿಕವಾಗಿ ಜೋಡೆತ್ತುಗಳ ಮೆರವಣಿಗೆಯನ್ನ ಆಚರಿಸಿದ್ರೆ, ಹಲವೆಡೆ ಕಾರ ಹುಣ್ಣಿಮೆಯನ್ನೇ ಆಚರಿಸಲಿಲ್ಲ.

ಮುಂಗಾರು ಆರಂಭವಾದ ಮೇಲೆ ಮೊದಲನೇಯ ಹುಣ್ಣಿಮೆ ಇದಾಗಿದೆ. ಗ್ರಾಮೀಣ ಭಾಗದಲ್ಲಿನ ರೈತಾಪಿ ವರ್ಗ ತಮ್ಮತಮ್ಮ ಹೊಲಗಳಿಗೆ ತೆರಳಿ ಬಿತ್ತನೆಕಾರ್ಯ ಮಾಡಿ, ವಿಶೇಷಪೂಜೆ ಸಲ್ಲಿಸೋದು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಾಡಿಕೆಯಾಗಿದೆ. ಆದರೆ, ಈ ಬಾರಿ ಅದ್ಯಾವುದು ಇಲ್ಲಿ ಕಂಡು ಬರಲಿಲ್ಲ.

ಕೊರೊನಾ ನಡುವೆ ಕಾರ ಹುಣ್ಣಿಮೆ ಸಂಭ್ರಮ

ಗ್ರಾಮೀಣ ಭಾಗದಲ್ಲಿನ ರೈತಾಪಿ ವರ್ಗಗಳ ಮನೆಗಳಲ್ಲಿನ ಜೋಡೆತ್ತುಗಳಿಗೆ ಬಣ್ಣ ಬಳಿದು, ವಿಶೇಷ ಅಲಂಕಾರ ಮಾಡಿ ಅವುಗಳನ್ನ ಸ್ಪರ್ಧೆಗೆ ಇಳಿಸಲಾಗುತ್ತೆ. ಊರ ಅಗಸೆ ಬಾಗಿಲಿಗೆ ಬೇವಿನ ಸೊಪ್ಪಿನ ತಳಿರನ್ನ ಉದ್ದವಾಗಿ ಕಟ್ಟಿ ಸುಮಾರು ಮೈಲಿಂದ ಜೋಡೆತ್ತುಗಳನ್ನ ಕರಿ ಬಿಡಲಾಗುತ್ತೆ. ಸ್ಪರ್ಧೆಯಲ್ಲಿ ಮೊದಲು ಬಂದಂತಹ ಜೋಡೆತ್ತುಗಳನ್ನ ಗ್ರಾಮದ ರಾಜಬೀದಿ ಯಲ್ಲಿ ಮೆರವಣಿಗೆ ಮಾಡಲಾಗುತ್ತೆ. ಆ ಬಳಿಕ, ಸ್ಪರ್ಧೆಯಲ್ಲಿ ಮುಂಚೂಣಿಯಾಗಿ ಬಂದಂತಹ ಜೋಡೆತ್ತುಗಳಿಗೆ ಸಂಬಂಧಿಸಿದ ರೈತರ ಮನೆಗಳಲ್ಲೇ ಇಳಿ ಸಂಜೆಯಲ್ಲೇ ಇಡೀ ಗ್ರಾಮಸ್ಥರಿಗೆ ಮಂಡಾಳು ವಗ್ಗರಣೆ ಹಾಗೂ ಕಡ್ಲೆ ಇಟ್ಟಿನ ಮೆಣಸಿನಕಾಯಿಯನ್ನ ತಯಾರಿಸಿ ಉಣಬಡಿಸಲಾಗುತ್ತೆ.

ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕಾರ ಹುಣ್ಣಿಮೆ ಹಬ್ಬದ ಸಂದರ್ಭ ಮನೆಗಳಲ್ಲಿನ ಎತ್ತುಗಳನ್ನು ತಂದು ಪೂಜಿಸುವುದು ವಾಡಿಕೆ. ಅಲ್ಲದೇ ಹಬ್ಬಕ್ಕೆ ಎಂದು ಕುಂಬಾರರು ಮಣ್ಣಿನಲ್ಲಿ ತಯಾರಿಸಿದ ಎತ್ತುಗಳನ್ನು ಮನೆಗೆ ತಂದು ಪೂಜಿಸುವ ಸಂಪ್ರದಾಯ ಸಹ ಇದೆ. ಹುಣ್ಣಿಮೆ ದಿನದಂದು ಎತ್ತುಗಳನ್ನು ತೊಳೆದು, ಕೊಂಬುಗಳನ್ನು ಬಣ್ಣಗಳಿಗೆ ಮತ್ತು ಮೈತುಂಬ ಬಣ್ಣ ಹಚ್ಚಿ, ರಾಸು ಶೃಂಗರಿಸಿ ಮನೆಯಲ್ಲಿ ಹೊಳಿಗೆ ತಿನಿಸುತ್ತಾರೆ. ಸಾಯಂಕಾಲ ಊರಿನ ಪ್ರಮುಖ ಹಾದಿಯಲ್ಲಿ ಎತ್ತುಗಳನ್ನು ಓಟಕ್ಕೆ ಬಿಡಲಾಗುತ್ತದೆ.

ಅಲಂಕಾರಗೊಂಡಿರುವ ಎತ್ತು

ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಉಪನಾಯಕನಹಳ್ಳಿ ( ಅಂಕಸಮುದ್ರ ಹತ್ತಿರದ ) ರೈತರು ರಾಸು ಶೃಂಗಾರದ ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸ್ಪರ್ಧೆಯಲ್ಲಿ ಯಾವ ರೈತನ ಎತ್ತು ಜಯಗಳಿಸುತ್ತದೆಯೋ ಅವರು ಆ ಜೋಡಿ ಎತ್ತುಗಳ ಅಲಂಕಾರದೊಂದಿಗೆ ಊರು ತುಂಬ ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಗುತ್ತದೆ. ಈ ಬಾರಿ ಜೋಡೆತ್ತು ಓಟದಲ್ಲಿ ಪ್ರಥಮ ಸ್ಥಾನ ಚೌಡಪ್ಪ, ದ್ವೀತೀಯ ಸ್ಥಾನ ಕಟ್ಟೆಪ್ಪ ಪಡೆದುಕೊಂಡರು.

ಮಳೆಗಾಲ ಆರಂಭದೊಂದಿಗೆ ಕೃಷಿ ಚಟುವಟಿಕೆಗಳಿಗೆ ಸಜ್ಜಾಗುವ ರೈತರು, ಕಾರ ಹುಣ್ಣಿಮೆ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದೊಂದಿಗೆ ಉತ್ತರ ಕರ್ನಾಟಕದ ಹಬ್ಬಗಳ ಸರಣಿ ಆರಂಭವಾಗುತ್ತದೆ. ಕಾರ ಹುಣ್ಣಿಮೆ ಕೇಂದ್ರ ಬಿಂದು ರೈತನ ಸಂಗಾತಿ ಎತ್ತು. ಮಳೆ ಪ್ರಾರಂಭವಾಗುವಾಗ ಎತ್ತುಗಳನ್ನು ಪೂಜಿಸಿ ಉಳುಮೆಗೆ ಸಿದ್ಧತೆ ಮಾಡುವುದು ಕಾರ ಹುಣ್ಣಿಮೆಯ ಸಂಕೇತವಾಗಿದೆ.

ಆದರೆ, ಮಹಾಮಾರಿ ಈ ಕೊರೊನಾ ಸೋಂಕಿನಿಂದಾಗಿ ಪಕ್ಕಾ ಜಾನಪದ ಸೊಗಡನ್ನ ಹೊಂದಿರುವ ಈ ಹಬ್ಬದ ಸಂಭ್ರಮ ಕಳೆಗುಂದಿದ್ದು, ಜೋಡೆತ್ತುಗಳ ಕರಿ ಬಿಡುವ ಪದ್ಧತಿಯೇ ಮರೀಚಿಕೆಯಾಗಿರೋದು ಕಂಡು ಬಂತು.

ABOUT THE AUTHOR

...view details