ಬಳ್ಳಾರಿ:ನಗರದ ಕನಕದುರ್ಗಮ್ಮ ಡಬಲ್ ರಸ್ತೆಯ ಮಧ್ಯೆ ಭಾಗದಲ್ಲಿರುವ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ರಸ್ತೆಯ ತುಂಬಾ ಜಲಧಾರೆ ಸೃಷ್ಟಿಯಾಗಿದೆ.
ಬಳ್ಳಾರಿಯ ಕನಕದುರ್ಗಮ್ಮ ರಸ್ತೆಯಲ್ಲೆಲ್ಲ ಜಲಧಾರೆ.. ಇದು ಯಾರ ನಿರ್ಲಕ್ಷ್ಯ - ಪೈಪ್ ಲೈನ್ ಒಡೆದು ನೀರು ಪೋಲು
ಪೈಪ್ ಲೈನ್ ಒಡೆದ ಕಾರಣದಿಂದಾಗಿ ಬಳ್ಳಾರಿಯ ಕನಕದುರ್ಗಮ್ಮ ರಸ್ತೆಯಲ್ಲ ಜಲಾವೃತಗೊಂಡಿದ್ದು, ಸಾಕಷ್ಟು ನೀರು ಪೋಲಾಗುತ್ತಿದೆ. ಇಷ್ಟಾದರೂ ಪಾಲಿಕೆ ಅಧಿಕಾರಿಗಳು ಮಾತ್ರ ಇತ್ತ ಬಾರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ಸೋಮವಾರ ಮಧ್ಯರಾತ್ರಿ ಈ ಪೈಪ್ ಲೈನ್ ಒಡೆದಿದ್ದು, ವಿಪರೀತ ನೀರು ಸೋರಿಕೆ ಆಗಿ ಹಳ್ಳದಂತೆ ಈ ನೀರು ಹರಿಯಲಾರಂಭಿಸಿದೆ. ಮಧ್ಯರಾತ್ರಿಯಿಂದ ಒಂದೇ ಸಮನೆ ಹರಿಯುತ್ತಿರುವ ನೀರಿನಲ್ಲೇ ಲಘು ಮತ್ತು ಮೋಟಾರ್ ವಾಹನಗಳು ಸಂಚರಿಸುತ್ತಿವೆ. ಬೆಳಗ್ಗೆಯಾದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಮಾತ್ರ ಇದರ ಬಗ್ಗೆ ಗಮನ ಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕುಡಿಯುವುದಕ್ಕೆ ನೀರಿನ ಸಮಸ್ಯೆ ಇದೆ. ಆದರೆ, ಇಲ್ಲಿ ಅನಗತ್ಯವಾಗಿ ನೀರು ಪೋಲಾಗುತ್ತದೆ. ಈ ಹಿಂದೆಯೂ ಕೂಡ ಇದೇ ಜಾಗದಲ್ಲಿ ಪೈಪ್ ಲೈನ್ ಒಡೆದು ಹೋಗಿತ್ತು. ಅಧಿಕಾರಿಗಳ ನಿರ್ಲಕ್ಷವೇ ಇದಕ್ಕೆಲ್ಲ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.